ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದ ಗಾಯಕಿ ಶ್ರುತಿ ಪ್ರಕಾಶ್ ಹೊಸ ಕಾರು ಖರೀದಿಸಿದ್ದಾರೆ. ಇದು ಶ್ರುತಿ ಪ್ರಕಾಶ್ ಖರೀದಿಸಿದ ಮೊದಲ ಲುಕ್ಷುರಿ ಕಾರು. ಇಷ್ಟೇ ಅಲ್ಲ ಹಲವು ದಿನಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದ ಶ್ರುತಿ ಪ್ರಕಾಶ್, ಇದೀಗ ಸಂತಸ ಹಂಚಿಕೊಂಡಿದ್ದಾರೆ.

ಹೊಸ ಕಾರು ನೋಡಿ ಭಾವುಕರಾದ ಶ್ರುತಿ ಪ್ರಕಾಶ್, ಪೂಜೆ ಮಾಡಿ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಸುಮಾರು 17.99 ಲಕ್ಷ ಬೆಲೆಯ ಹೊಸ ಸ್ಕೋಡಾ ಸ್ಲಾವಿಯಾ ಮಾಂಟೆ ಕಾಲ್ರೋ ಸ್ಪೆಷಲ್ ಎಡಿಶನ್ ಕಾರು ಖರೀದಿಸಿದ ಶ್ರುತಿ ಪ್ರಕಾಶ್, ಕಾರಿನ ಕವರ್ ಸರಿಸಿ ಸಂಭ್ರಮಿಸಿದ್ದಾರೆ.

ಇದೇ ವೇಳೆ ಕಾರಿನ ಡೋರ್ ತೆರೆಯುತ್ತಿದ್ದಂತೆ ಶ್ರುತಿ ಪ್ರಕಾಶ್ ಭಾವುಕರಾಗಿದ್ದಾರೆ. ಕಾರಣ ಹಲವರು ಶ್ರುತಿ ಪ್ರಕಾಶ್‌ಗೆ ಸಾಧ್ಯವಿಲ್ಲ ಎಂದು ಹೀಯಾಳಿಸಿದ್ದರು. ಹಲವು ಅಡೆ ತಡೆಗಳ ನಡುವೆ ಶ್ರುತಿ ಪ್ರಕಾಶ್ ಕಾರು ಖರೀದಿಸಿದ್ದಾರೆ. ಹೀಗಾಗಿ ಕಾರು ನೋಡಿದ ಬೆನ್ನಲ್ಲೇ ಖುಷಿಗೆ ಕಣ್ಣೀರಿಟ್ಟಿದ್ದಾರೆ.
ಹೊಸ ಕಾರು ಖರೀದಿಸಿದ ಬಳಿಕ ಸಂತಸ ಹಂಚಿಕೊಂಡ ಶ್ರುತಿ ಪ್ರಕಾಶ್ ನನಗೆ ಮೊದಲ ಪ್ರೀತಿ ರೀತಿ ಭಾಸವಾಗುತ್ತಿದೆ ಎಂದಿದ್ದಾರೆ. 10 ವರ್ಷ ಬಾಂಬೆ ಜೀವನದಲ್ಲಿ ಹಲವು ಸವಾಲು ಎದುರಿಸಿದ್ದೇನೆ, ತಾಳ್ಮೆ, ನಂಬಿಕೆ, ಹೋರಾಟವನ್ನು ಕಲಿತಿದ್ದೇನೆ. ಪ್ರತಿ ಬಾರಿ ಆಡಿಷನ್ ಹೋಗಿ ಕಾಯುತ್ತಿದ್ದೆ, ನನ್ನ ಅವಕಾಶಕ್ಕಾಗಿ ಹಾತೊರೆಯುತ್ತಿದ್ದೆ, ಪ್ರಯತ್ನಿಸುತ್ತದ್ದೆ. ನನಗೆ ಕೆಲಸವಿರಲಿ, ಇಲ್ಲದಿರಲಿ ಪ್ರತಿ ದಿನ ನಾನು ಹೋರಾಟ ಮಾಡುತ್ತಲೇ ಇದ್ದೆ. ಹಲವರು ಅಷ್ಟೇ ಅಲ್ಲ ವಿಶ್ವವೇ ನಿನ್ನಿಂದ ಆಗಲ್ಲ ಎಂದು ಹೀಯಾಳಿಸಿತ್ತು.
ಆದರೆ, ನನ್ನೊಳಗೆ ಸಣ್ಮ ಧ್ವನಿಯೊಂದು ನಿನ್ನಿಂದ ಸಾಧ್ಯ ಎಂದಿತ್ತು. ದೇವರ ಆಶೀರ್ವಾದ, ಪೋಷಕರ ಬೆಂಬಲ, ಎಲ್ಲರ ಪ್ರೀತಿ, ವಿಶ್ವಾಸದ ಜೊತೆಗೆ ನನ್ನಲ್ಲಿ ನಂಬಿಕೆ ಇಟ್ಟು ಮುನ್ನಡೆಯುವ ಆತ್ಮವಿಶ್ವಾಸ ಕೈಹಿಡಿಯಿತು. ಮೊದಲ ಕಾರು, ಹಲವು ಕನಸುಗಳಲ್ಲಿ ಒಂದು ಕನಸು ಮನೆಗೆ ಬಂದಿದೆ, ಪಯಣ ಆರಂಭವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : “ಕ್ರಿಸ್ ಗೇಲ್‌ಗಿಂತಲೂ ಡೇಂಜರಸ್, ಇವರು ಭಾರತದ ಹೊಸ ರನ್ ಮಷೀನ್” | ಅಭಿಷೇಕ್ ಶರ್ಮಾ ಅಬ್ಬರಕ್ಕೆ ಫಿದಾ ಆದ ಮಹಮ್ಮದ್ ಕೈಫ್!



















