ನವದೆಹಲಿ: ಭಾರತದ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿರುವಾಗಲೇ, ಹ್ಯುಂಡೈ ತನ್ನ ಜನಪ್ರಿಯ ‘ಕ್ರೆಟಾ ಎಲೆಕ್ಟ್ರಿಕ್’ ಕಾರಿಗೆ ಎರಡು ಮಹತ್ವದ ಅಪ್‌ಗ್ರೇಡ್‌ಗಳನ್ನು ನೀಡುವ ಮೂಲಕ ಪ್ರತಿಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ. ವಿಶೇಷವೆಂದರೆ, ಈ ಬದಲಾವಣೆಗಳಿಗೆ ಕಾರಿನ ಯಾವುದೇ ಹಾರ್ಡ್‌ವೇರ್ ಅಥವಾ ಬ್ಯಾಟರಿ ಬದಲಿಸುವ ಅಗತ್ಯವಿಲ್ಲ. ಕೇವಲ ಒಂದು ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಮೈಲೇಜ್ (ರೇಂಜ್) ಮತ್ತು ಚಾರ್ಜಿಂಗ್ ವೇಗ ಎರಡನ್ನೂ ಹೆಚ್ಚಿಸಲಾಗಿದೆ!

- ಮೈಲೇಜ್‌ನಲ್ಲಿ ಭಾರೀ ಏರಿಕೆ:
ಹ್ಯುಂಡೈ ಈಗ ತನ್ನ ಎರಡೂ ಬ್ಯಾಟರಿ ವೇರಿಯಂಟ್‌ಗಳ ಮೈಲೇಜ್ ಅಥವಾ ರೇಂಜ್ (Range) ಕ್ಲೈಮ್ ಅನ್ನು ಹೆಚ್ಚಿಸಿದೆ. ಡ್ರೈವ್‌ಟ್ರೇನ್ ಮತ್ತು ಬ್ಯಾಟರಿ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್‌ನಲ್ಲಿ ಮಾಡಲಾದ ಬದಲಾವಣೆಯಿಂದ ಇದು ಸಾಧ್ಯವಾಗಿದೆ.
- 42 kWh ಬ್ಯಾಟರಿ: ಹಿಂದೆ 390 ಕಿ.ಮೀ. ಮೈಲೇಜ್ ಕ್ಲೈಮ್ ಮಾಡಲಾಗುತ್ತಿತ್ತು. ಈಗ ಅದು 420 ಕಿ.ಮೀ. ಗೆ ಏರಿಕೆಯಾಗಿದೆ (30 ಕಿ.ಮೀ. ಹೆಚ್ಚಳ).
- 51.4 kWh ಬ್ಯಾಟರಿ: ಹಿಂದೆ 473 ಕಿ.ಮೀ. ಇದ್ದ ಮೈಲೇಜ್ ಈಗ ಬರೋಬ್ಬರಿ 510 ಕಿ.ಮೀ. ಗೆ ಏರಿದೆ (37 ಕಿ.ಮೀ. ಹೆಚ್ಚಳ).
ನೈಜ ರಸ್ತೆಗಳಲ್ಲಿ ಇದು ಸುಮಾರು 350 ಕಿ.ಮೀ. ವರೆಗೆ ಸಿಗುವ ನಿರೀಕ್ಷೆಯಿದೆ, ಇದು ದೂರದ ಪ್ರಯಾಣಕ್ಕೆ ಆತ್ಮವಿಶ್ವಾಸ ನೀಡುತ್ತದೆ.

- 100 kW ಫಾಸ್ಟ್ ಚಾರ್ಜಿಂಗ್ ಸಪೋರ್ಟ್:
ಇದು ಎಲೆಕ್ಟ್ರಿಕ್ ಕಾರು ಮಾಲೀಕರಿಗೆ ನಿಜಕ್ಕೂ ಗೇಮ್ ಚೇಂಜರ್. ಇಲ್ಲಿಯವರೆಗೆ ಕ್ರೆಟಾ ಇವಿ ಕೇವಲ 50 kW ಡಿಸಿ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತಿತ್ತು. ಇದರಲ್ಲಿ 10 ರಿಂದ 80% ಚಾರ್ಜ್ ಆಗಲು 58 ನಿಮಿಷ ಬೇಕಾಗುತ್ತಿತ್ತು. ಆದರೆ ಹೊಸ ಅಪ್‌ಡೇಟ್ ನಂತರ, ಈಗ ಕಾರು 100 kW ಡಿಸಿ ಫಾಸ್ಟ್ ಚಾರ್ಜರ್‌ಗಳನ್ನು ಬೆಂಬಲಿಸುತ್ತದೆ. ಇದರ ಫಲವಾಗಿ, 10 ರಿಂದ 80% ಚಾರ್ಜ್ ಆಗಲು ಈಗ ಕೇವಲ 39 ನಿಮಿಷ ಸಾಕು! ಹೈವೇಗಳಲ್ಲಿ ಲಾಂಗ್ ಡ್ರೈವ್ ಹೋಗುವಾಗ ಇದು ಸುಮಾರು 20 ನಿಮಿಷಗಳ ಅಮೂಲ್ಯ ಸಮಯವನ್ನು ಉಳಿಸುತ್ತದೆ. - ಹಳೆ ಗ್ರಾಹಕರಿಗೂ ಲಭ್ಯ: ಈ ಅಪ್‌ಗ್ರೇಡ್ ಕೇವಲ ಹೊಸ ಕಾರುಗಳಿಗೆ ಸೀಮಿತವಲ್ಲ ಎಂಬುದು ಸಂತಸದ ಸುದ್ದಿ. ಈಗಾಗಲೇ ಕ್ರೆಟಾ ಎಲೆಕ್ಟ್ರಿಕ್ ಹೊಂದಿರುವ ಗ್ರಾಹಕರಿಗೂ ‘ಓವರ್ ದಿ ಏರ್’ (OTA) ಅಪ್‌ಡೇಟ್ ಅಥವಾ ಸರ್ವಿಸ್ ಸೆಂಟರ್‌ಗಳ ಮೂಲಕ ಹಂತ ಹಂತವಾಗಿ ಈ ಸಾಫ್ಟ್‌ವೇರ್ ಅಪ್‌ಡೇಟ್ ನೀಡಲಾಗುತ್ತಿದೆ.
- ಟಾಟಾ ಮತ್ತು ಎಂಜಿಗೆ ಸೆಡ್ಡು : ಈ ಅಪ್‌ಗ್ರೇಡ್‌ನೊಂದಿಗೆ ಕ್ರೆಟಾ ಎಲೆಕ್ಟ್ರಿಕ್ ಈಗ ತನ್ನ ಪ್ರಮುಖ ಪ್ರತಿಸ್ಪರ್ಧಿಗಳಾದ ಟಾಟಾ ನೆಕ್ಸಾನ್ ಇವಿ ಲಾಂಗ್ ರೇಂಜ್ (465 ಕಿ.ಮೀ.) ಮತ್ತು ಎಂಜಿ ಝಡ್‌ಎಸ್ ಇವಿ (461 ಕಿ.ಮೀ.) ಗಿಂತ ಕಾಗದದ ಮೇಲೆ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. 510 ಕಿ.ಮೀ. ಮೈಲೇಜ್ ಮತ್ತು 39 ನಿಮಿಷದ ಚಾರ್ಜಿಂಗ್ ಟೈಮ್ ಕ್ರೆಟಾಗೆ ಮಾರುಕಟ್ಟೆಯಲ್ಲಿ ಸ್ಪಷ್ಟ ಮುನ್ನಡೆ ತಂದುಕೊಡುವ ಸಾಧ್ಯತೆಯಿದೆ.
ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೇಸ್ ಮಾಡೆಲ್ ಎಕ್ಸಿಕ್ಯುಟಿವ್ (42 kWh) ರೂ. 18.02 ಲಕ್ಷದಿಂದ (ಎಕ್ಸ್ ಶೋರೂಂ) ಆರಂಭವಾದರೆ, ಟಾಪ್ ಮಾಡೆಲ್ ಎಕ್ಸಲೆನ್ಸ್ ಲಾಂಗ್ ರೇಂಜ್ (51.4 kWh) ಬೆಲೆ ರೂ. 23.96 ಲಕ್ಷವಿದೆ.
ಇದನ್ನೂ ಓದಿ : ಬಣ್ಣಗಳ ಮಿಂಚು, 7 ಸೀಟಿನ ಆರಾಮ | ನಿಸ್ಸಾನ್ ‘ಗ್ರಾವೈಟ್’ ಎಂಪಿವಿ ಬಿಡುಗಡೆಗೆ ಕೌಂಟ್‌ಡೌನ್



















