ಚಾಮರಾಜನಗರ : ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿ ಪ್ರತ್ಯಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಹುಲಿ ಮರಿ ಬೋನಿಗೆ ಬಿದ್ದಿದೆ.
ಈ ಹಿಂದೆ ನಂಜೇದೇವನಪುರದ ಬಳಿ ಕಾಣಿಸಿಕೊಂಡಿದ್ದ ತಾಯಿ ಹಾಗು ನಾಲ್ಕು ಹುಲಿ ಮರಿಗಳು ಕಾಣಿಸಿಕೊಂಡಿದ್ದವು. ಈಗಾಗಲೇ ತಾಯಿ ಹುಲಿ ಹಾಗೂ ಎರಡು ಮರಿ ಹುಲಿಯನ್ನು ಸೆರೆಹಿಡಿದಿದ್ದು, ಇದೀಗ ಮತ್ತೊಂದು ಹುಲಿ ಮರಿ ಅರಣ್ಯಾಧಿಕಾರಿಗಳು ಇರಿಸಿದ ಬೋನಿಗೆ ಬಿದ್ದಿದೆ.
ಮೂರನೇ ಮರಿ ಸೆರೆಯಾದ ಬೆನ್ನಲ್ಲೇ ನಾಲ್ಕನೇ ಮರಿಗೆ ಸಾಕಾನೆ ಬಳಸಿಕೊಂಡು ಕಾರ್ಯಚರಣೆಗೆ ಅರಣ್ಯ ಸಿಬ್ಬಂದಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ : ಮದುವೆಯಾದ ಎರಡೇ ತಿಂಗಳಿಗೆ ಮತ್ತೊಬ್ಬನ ಜೊತೆ ಪತ್ನಿ ಪರಾರಿ | ಡೆತ್ ನೋಟ್ ಬರೆದಿಟ್ಟು ನವ ವಿವಾಹಿತ ಆತ್ಮಹತ್ಯೆ



















