ಹುಬ್ಬಳ್ಳಿ : ಹುಚ್ಚುನಾಯಿಯೊಂದು ಭೀಕರ ದಾಳಿ ಮಾಡಿದ ಪರಿಣಾಮ 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿರುವ ಘಟನೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ. ಮನಬಂದಂತೆ ನಾಯಿಯು ಕಚ್ಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಕ್ಕಳು, ವೃದ್ಧರು, ಪಾದಚಾರಿಗಳು, ವೃದ್ಧರು ಸೇರಿ 15ಕ್ಕೂ ಅಧಿಕ ಜನರ ಮೇಲೆ ಹುಚ್ಚುನಾಯಿ ಅಟ್ಯಾಕ್ ಮಾಡಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದವರ ಮೇಲೆ ದಾಳಿ ಮಾಡಿದೆ. ಹಲವರಿಗೆ ಕೈ, ಕಾಲು ಹಾಗೂ ಮುಖದ ಭಾಗಕ್ಕೆ ಬರ್ಬರವಾಗಿ ನಾಯಿಯು ಕಚ್ಚಿದೆ.
ಗಾಯಗೊಂಡಿರುವವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಕೆಲವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಚ್ಚುನಾಯಿ ದಾಳಿಯಿಂದ ಆತಂಕ ವಾತಾವರಣ ಸೃಷ್ಠಿಯಾಗಿದ್ದು, ಕೊನೆಗೂ ನಾಯಿಯನ್ನು ಗ್ರಾಮಸ್ಥರು ಬೆನ್ನತ್ತಿ ಹೊಡೆದು ಕೊಂದಿದ್ದಾರೆ.ಈ ಪ್ರಕರಣವು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಮೈಸೂರಿನಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದ KSRTC ಬಸ್ | ಮಹಿಳೆ ಸಾವು, ಇಬ್ಬರಿಗೆ ಗಾಯ!



















