ಬೆಂಗಳೂರು : ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ, ಕೈದಿಗಳಿಂದ ನಿಷೇಧಿತ ವಸ್ತುಗಳ ಬಳಕೆ ಕುರಿತು ಶೋಧ ಕಾರ್ಯ ಮುಂದುವರೆದಿದೆ. ‘ಆಪರೇಷನ್ ಕಾರಾಗೃಹ ಸುಧಾರಣ ಸಂಕಲ್ಪ’ ಅಡಿಯಲ್ಲಿ ಪ್ರತಿದಿನ ಸೆಲ್ ಮತ್ತು ಬ್ಯಾರಕ್‌ಗಳಲ್ಲಿ ಸರ್ಚಿಂಗ್ ನಡೆಯುತ್ತಿದೆ.
ಈ ಶೋಧ ಕಾರ್ಯದಲ್ಲಿ ಈಗಾಗಲೇ ಡಬ್ಬಲ್ ಸೆಂಚೂರಿಯ ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ. ಪತ್ತೆಯಾಗಿರುವ ಫೋನ್‌ಗಳಲ್ಲಿ ಹೆಚ್ಚಾಗಿ ಆಂಡ್ರಾಯ್ಡ್ ಫೋನ್‌ಗಳು ಕಂಡುಬಂದಿದ್ದು, ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಕೈದಿಗಳ ಬ್ಯಾರಕ್‌ಗಳಲ್ಲಿ ದೊರಕಿವೆ.
ಮತ್ತೊಂದೆಡೆ, ಜೈಲಿನ ಮೂಲೆ–ಮೂಲೆಗಳಲ್ಲಿ ರೂಲ್ ಫೋಲ್ಸ್ ಪತ್ತೆ ಕಾರ್ಯ ನಡೆಯುತ್ತಿದೆ. ಮೇನ್ ಗೇಟನ್ನು ಹೊರತು ಪಡಿಸಿ ಎಲ್ಲಿಂದ ಸಿಗರೇಟ್, ಮೊಬೈಲ್‌ಗಳು ಜೈಲು ಸೇರಿಸುತ್ತಿವೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಜೈಲು ಕಾಂಪೌಂಡ್ ಸುತ್ತಲೂ ಕ್ಲೀನಿಂಗ್ ಮಾಡಲಾಗುತ್ತಿದ್ದು, ಕೆಲ ಸೆಲ್‌ಗಳಲ್ಲಿ ಅಕ್ರಮವಾಗಿ ಉಪಯೋಗವಾಗುತ್ತಿದ್ದ ಬೆಡ್ ಶೀಟ್, ಕುಕ್ಕರ್, ಚಾಕು ಮಾದರಿಯ ವಸ್ತುಗಳನ್ನು ತೆರವುಗೊಳಿಸಲಾಗಿದೆ. ಜೊತೆಗೆ ಅಕ್ರಮವಾಗಿ ಸರಬರಾಜಾಗುತ್ತಿದ್ದ ಬೀಡಿ, ಸಿಗರೇಟ್ ಮತ್ತು ಮೊಬೈಲ್‌ಗಳ ಮೇಲೆಯೂ ಹದ್ದಿನ ಕಣ್ಣನಿಡಲಾಗಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಜಿಬಿಎ ವಾರ್ಡ್ ಮೀಸಲಾತಿ ಆಕ್ಷೇಪಣೆ ಸಲ್ಲಿಸಲು ಇಂದು ಕೊನೆಯ ದಿನ | 700ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ



















