ಬೆಂಗಳೂರು: ಬೆಂಗಳೂರಿನ ಹೆಮ್ಮೆಯ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ಲವರ್ ಶೋಗೆ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ. ತೇಜಸ್ವಿ ವಿಸ್ಮಯ ಲೋಕದಂತೆ ರೂಪುಗೊಂಡಿರುವ ಈ ಪುಷ್ಪ ಪ್ರದರ್ಶನವನ್ನು ಕೇವಲ 7 ದಿನದಲ್ಲಿ 2,97,021 ಜನರು ವೀಕ್ಷಿಸಿದ್ದು, ಒಟ್ಟು 46,89,890 ರೂಪಾಯಿ ಆದಾಯ ಸಂಗ್ರಹವಾಗಿದೆ.
ನಿನ್ನೆ ಒಂದೇ ದಿನ 42,105 ಜನರು ಪ್ಲವರ್ ಶೋ ವೀಕ್ಷಿಸಿದ್ದು, ಇದರಿಂದ 5 ಲಕ್ಷ 70 ಸಾವಿರ ರೂಪಾಯಿ ಆದಾಯ ಲಭಿಸಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿರುವುದು ಲಾಲ್‌ಬಾಗ್ ಪ್ಲವರ್ ಶೋ ಜನಪ್ರಿಯತೆಯನ್ನು ಸ್ಪಷ್ಟಪಡಿಸುತ್ತದೆ.
ದಿನವಾರು ಪ್ಲವರ್ ಶೋ ವೀಕ್ಷಕರ ಮತ್ತು ಆದಾಯದ ವಿವರ:
ಮೊದಲ ದಿನ
ಪ್ಲವರ್ ಶೋ ವೀಕ್ಷಿಸಿದವರು -32,950
ಸಂಗ್ರಹವಾದ ಮೊತ್ತ: 2,56,330.
ಎರಡನೇ ದಿನ
ಪ್ಲವರ್ ಶೋ ವೀಕ್ಷಿಸಿದವರು -39,790
ಸಂಗ್ರಹವಾದ ಮೊತ್ತ:6,78,560.
ಮೂರನೇ ದಿನ
ಪ್ಲವರ್ ಶೋ ವೀಕ್ಷಿಸಿದವರು -49,721
ಸಂಗ್ರಹವಾದ ಮೊತ್ತ: 17.60 ಲಕ್ಷಗಳು
ನಾಲ್ಕನೇ ದಿನ
ಪ್ಲವರ್ ಶೋ ವೀಕ್ಷಿಸಿದವರು -68,496
ಸಂಗ್ರಹವಾದ ಮೊತ್ತ: 31.40 ಲಕ್ಷಗಳು
ಐದನೇ ದಿನ
ಪ್ಲವರ್ ಶೋ ವೀಕ್ಷಿಸಿದವರು – 26,277
ಸಂಗ್ರಹವಾದ ಮೊತ್ತ: 5.31 ಲಕ್ಷಗಳು
ಆರನೇ ದಿನ
ಪ್ಲವರ್ ಶೋ ವೀಕ್ಷಿಸಿದವರು -37,682
ಸಂಗ್ರಹವಾದ ಮೊತ್ತ: 5.80 ಲಕ್ಷಗಳು
ಏಳನೇ ದಿನ
ಪ್ಲವರ್ ಶೋ ವೀಕ್ಷಿಸಿದವರು- 42,105
ಸಂಗ್ರಹವಾದ ಮೊತ್ತ: 5.7 ಲಕ್ಷಗಳು
ಪುಷ್ಪಗಳಿಂದ ಅಲಂಕೃತಗೊಂಡ ಅದ್ಭುತ ಕಲಾಕೃತಿಗಳು, ವಿಶೇಷ ಥೀಮ್‌ಗಳು ಹಾಗೂ ನೈಸರ್ಗಿಕ ಸೌಂದರ್ಯವು ಜನರನ್ನು ಆಕರ್ಷಿಸುತ್ತಿದ್ದು, ಮುಂದಿನ ದಿನಗಳಲ್ಲಿ ವೀಕ್ಷಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ : 30 ಸಾವಿರ ರೂ. ಸಂಬಳ



















