ಬೀದರ್ : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಆಗಿರಲು ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಶರಣ ಪ್ರಕಾಶ ಪಾಟೀಲ್ ಹೇಳಿದ್ದಾರೆ.
ಸಚಿವ ಶರಣ ಪ್ರಕಾಶ ಪಾಟೀಲ್ ವರದಿಗಾರರೊಂದಿಗೆ ಮಾತನಾಡುತ್ತಾ, ಬಾಂಗ್ಲಾದವರು ಬೆಂಗಳೂರಿನಲ್ಲಿ ಇದ್ದಾರೆ ಅಂತ ಹೇಳದವರು ಯಾರು? ಬಾಂಗ್ಲಾ ಪ್ರಜೆಗಳು ನಮ್ಮ ದೇಶದಲ್ಲಿ ಇದ್ದಾರೆ ಎಂದರೆ ಅದು ಕೇಂದ್ರ ಸರ್ಕಾರದ ವೈಫಲ್ಯ ದಾಖಲಾತಿಗಳಿಲ್ಲದೆ ಯಾರಾದರೂ ನಮ್ಮ ದೇಶದೊಳಗೆ ಬಂದರೆ ಅದು ಕೇಂದ್ರವೇ ಹೊಣೆ ಎಂದಿದ್ದಾರೆ.
ಈ ವಿಚಾರವನ್ನು ಅವರೇ ನೋಡಿಕೊಳ್ಳಬೇಕು. ಅದು ಅವರ ಜವಾಬ್ದಾರಿ. ಅಕ್ರಮವಾಗಿ ಯಾರಾದರೂ ಬಂದಿದ್ದರೆ ಅದನ್ನ ಕೇಂದ್ರ ಸರ್ಕಾರ ತನಿಖೆ ಮಾಡಬೇಕು. ಅದರ ಸಂಪೂರ್ಣ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರ
ಬದಲಾವಣೆ ಚರ್ಚೆ ಕೇವಲ ಮಾಧ್ಯಮಗಳಲ್ಲಿ ಮಾತ್ರ ಇದೇ, ನಮ್ಮ ಪಕ್ಷದಲ್ಲಿ ಇಲ್ಲಾ ಸಿಎಂ ಬದಲಾವಣೆ ಬಗ್ಗೆ ನಮಗೆ ಗೊತ್ತಿಲ್ಲ. ನೀವೂ ಗೊತ್ತಿರೋರನ್ನ ಕೇಳ್ಬೇಕು ಡಿಕೆ, ರಾಹುಲ್ ಭೇಟಿ ಮಾಡುವ ವಿಚಾರವು ನನಗೆ ಗೊತ್ತಿಲ್ಲ ಮಾಹಿತಿ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಮಾನ್ಯ ಹತ್ಯೆ ಪ್ರಕರಣ | ಕೊಲೆಗಡುಕರ ಬಂಧನಕ್ಕೆ ಬಿಜೆಪಿ ಎಸ್‌ಸಿ ಮೋರ್ಚಾ ಆಗ್ರಹ



















