ಕೊಪ್ಪಳ : ಜಿಲ್ಲೆಯ ಕೆಲ ಶಾಲೆಗಳ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷರ ದಾಸೋಹ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಅನಿತಾ ಹಾಗೂ ಇಬ್ಬರು ಸಹಾಯಕ ನಿರ್ದೇಶಕರುಗಳಾದ ಮಲ್ಲಿಕಾರ್ಜುನ ಗುಡಿ, ಮಹಾಂತಯ್ಯ ಸೊಪ್ಪಿಮಠ ಎಂಬವರನ್ನು ಅಮಾನತು ಮಾಡಲಾಗಿದೆ.
ಕೊಪ್ಪಳ ತಾಲೂಕಿನ ನೃಪತುಂಗ ಶಾಲೆ, ನಿಂಗಾಪೂರ ಶಾಲೆ ಹಾಗೂ ಕುಷ್ಟಗಿ ತಾಲೂಕಿನ ಕೆಲ ಶಾಲೆಯ ಬಿಸಿಯೂಟದಲ್ಲಿ ಇತ್ತೀಚೆಗೆ ಹುಳುಗಳು ಪತ್ತೆಯಾಗಿದ್ದವು. ಈ ಕುರಿತು ಸರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಕರ್ತವ್ಯಲೋಪದಡಿ ಮೂವರನ್ನು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ : ನಿಯಮ ಉಲ್ಲಂಘನೆ ಮಾಡಿದ ಪಿಜಿಗಳಿಗೆ GBA ಶಾಕ್ | ಶುಚಿತ್ವ ಕಾಪಾಡದಿದ್ದಕ್ಕೆ ಬಿತ್ತು ಬೀಗ!



















