ಬೆಂಗಳೂರು | ಯಲಹಂಕದ ಕೋಗಿಲು ಲೇಔಟ್ ಸರ್ಕಾರಿ ಜಾಗ ಒತ್ತುವರಿ ಪ್ರಕರಣವು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದೀಗ ತುರಾತುರಿಯಲ್ಲಿ ನಾಳೆಯೇ ನಿರಾಶ್ರಿತರಿಗೆ ಹಕ್ಕು ಪತ್ರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ನಾಳೆ ಜಿಬಿಎ ಕೇಂದ್ರ ಕಛೇರಿಯಲ್ಲಿ ಹಕ್ಕು ಪತ್ರ ವಿತರಣೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೋಗಿಲು ಬಳಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದ 25 ಕುಟುಂಬಕ್ಕೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ.
ನಾಳೆ ಸಂಜೆ 4 ಗಂಟೆಗೆ ಜಿಬಿಎ ಕೇಂದ್ರ ಕಛೇರಿಯ ಡಾ. ರಾಜಕುಮಾರ ಗಾಜಿನ ಮನೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭಾಗಿಯಾಗಲಿದ್ದಾರೆ. ಮೊದಲ ಹಂತದಲ್ಲಿ 25 ಮಂದಿಗೆ ರಾಜೀವ್ ಗಾಂಧಿ ವಸತಿ ಸಂಕೀರ್ಣದಲ್ಲಿ ಮನೆ ವಿತರಣೆ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ.

ಮನೆ ನೀಡಲು ಸರ್ಕಾರ ಹಾಕಿರುವ ಮುಖ್ಯ ಮಾನದಂಡಗಳು ಏನು?
ದಾಖಲೆಗಳು ಸಂಪೂರ್ಣ ಸ್ಪಷ್ಟವಾಗಿರಬೇಕು.
ಅರ್ಜಿದಾರರು ಕರ್ನಾಟಕದ ಯಾವುದಾದರೂ ಒಂದು ಭಾಗದವರಾಗಿರಬೇಕು.
ಬೇರೆ ರಾಜ್ಯದಿಂದ ಬಂದವರಿಗೆ ಅರ್ಹತೆ ಇಲ್ಲ.
ಬೆಂಗಳೂರಿನಲ್ಲಿ ನೆಲೆಸಿರಬೇಕು ಮತ್ತು ಕೋಗಿಲೆ ಲೇಔಟ್‌ನಲ್ಲಿ ಕನಿಷ್ಠ 5 ವರ್ಷಗಳಿಂದ ವಾಸಿಸುತ್ತಿರಬೇಕು.
ಒಂದೇ ಕುಟುಂಬದಿಂದ ಒಂದಕ್ಕಿಂತ ಹೆಚ್ಚು ಅರ್ಜಿ ಬಂದರೆ ರೇಷನ್ ಕಾರ್ಡ್ ಆಧಾರದಲ್ಲಿ ಪರಿಗಣಿಸಲಾಗುತ್ತದೆ.
ವೋಟರ್ ಐಡಿ, ರೇಷನ್ ಕಾರ್ಡ್, ಮಕ್ಕಳ ಶಾಲಾ ದಾಖಲಾತಿ ಪತ್ರಗಳಿಗೆ ಆದ್ಯತೆ ನೀಡಲಾಗುತ್ತದೆ.
ಇದನ್ನೂ ಓದಿ : ಹೆಣ್ಣು ಮಗಳು ಯಾವ ಪಕ್ಷಕ್ಕಾದ್ರೂ ಸೇರಿರಲಿ ವಿವಸ್ತ್ರಗೊಳಿಸಬಾರದು | ಸಿ.ಟಿ ರವಿ



















