ಬೆಂಗಳೂರು: ಎಲ್ಐಸಿ ಏಜೆಂಟರು ನಮ್ಮ ಸಂಬಂಧಿಕರು, ಸ್ನೇಹಿತರು ಎಂಬ ಮುಲಾಜಿಗೆ ಬಿದ್ದು ಪ್ಲಾನ್ ಇರದಿದ್ದರೂ ಎಲ್ಐಸಿ ಪಾಲಿಸಿ ಖರೀದಿಸುತ್ತಾರೆ. ಇನ್ನು, ಅವಶ್ಯಕತೆ ಇದೆ ಅಂತೂ ಎಲ್ಐಪಿ ಪಾಲಿಸಿ ಖರೀದಿಸುವವರೂ ಇದ್ದಾರೆ. ಆದರೆ, ಕೆಲವೊಂದು ಸಲ ಹೆಚ್ಚಾದ ಖರ್ಚುಗಳು, ಜವಾಬ್ದಾರಿಗಳಿಂದಾಗಿ ಎಲ್ಐಸಿ (LIC) ಪಾಲಿಸಿಯ ಪ್ರೀಮಿಯಂ ಕಟ್ಟಲು ಆಗುವುದಿಲ್ಲ. ಇಂತಹ ಕಷ್ಟದ ಸಂದರ್ಭಗಳಲ್ಲಿ ಸುಲಭವಾಗಿ ಎಲ್ಐಸಿ ಪ್ರೀಮಿಯಂ ಕಟ್ಟುವುದು ಹೇಗೆ ಎಂಬುದಕ್ಕೆ ಹೊಸ ಮಾರ್ಗ ಇದೆ. ಅದರ ಕುರಿತ ಮಾಹಿತಿ ಇಲ್ಲಿದೆ.
ನೀವೇನಾದರೂ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ನಿಮಗೆ ಪಿಎಫ್ ಸೌಕರ್ಯವಿದ್ದರೆ, ನೀವು ಪಿಎಫ್ ಮೊತ್ತದಿಂದಲೇ ನೇರವಾಗಿ ಎಲ್ಐಸಿ ಪ್ರೀಮಿಯಂ ಕಟ್ಟಬಹುದು. ಹೌದು, ನೀವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಫಾರಂ 14ಅನ್ನು ತುಂಬುವ ಮೂಲಕ, ನಿಮ್ಮ ಪಿಎಫ್ ಖಾತೆಯ ಹಣದಿಂದಲೇ ಪ್ರತಿ ಬಾರಿಯೂ ಎಲ್ಐಸಿ ಪ್ರೀಮಿಯಂ ಪಾವತಿಸಬಹುದಾಗಿದೆ.
ಎಲ್ಐಸಿ ಪ್ರೀಮಿಯಂ ಕಟ್ಟುವ ಸೇವೆ ಪಡೆಯಲು ನೀವು ಇಪಿಎಫ್ಒದ ಸಕ್ರಿಯ ಮೆಂಬರ್ ಆಗಿರಬೇಕು. ಅಲ್ಲದೆ, ನಿಮ್ಮ ಖಾತೆಯಲ್ಲಿ ಎರಡು ತಿಂಗಳ ಮೂಲ ಸಂಬಳದಷ್ಟು ಮೊತ್ತ ಇರಬೇಕು. ನಿಮ್ಮ ಹೆಸರಿನಲ್ಲಿಯೇ ಎಲ್ಐಸಿ ಪಾಲಿಸಿ ಇರಬೇಕು. ಎಲ್ಐಸಿ ಪಾಲಿಸಿ ಇದ್ದವರಿಗೆ ಮಾತ್ರ ಈ ಸೇವೆ ದೊರೆಯುತ್ತದೆ. ಬೇರೆ ಪಾಲಿಸಿಗಳಿಗೆ ಅನ್ವಯವಾಗುವುದಿಲ್ಲ. ಈ ಪ್ರಕ್ರಿಯೆ ಆಯ್ಕೆ ಮಾಡಿಕೊಂಡರೆ ನಿಯಮಿತವಾಗಿ ನಿಮ್ಮ ಪಿಎಫ್ ಖಾತೆಯಿಂದ ಪ್ರೀಮಿಯಂ ಮೊತ್ತ ಕಡಿತವಾಗುತ್ತದೆ.
ಸೇವೆ ಪಡೆಯೋದು ಹೇಗೆ?
- ಮೊದಲಿಗೆ ನೀವು https://www.epfindia.gov.in/site_en/index.php ವೆಬ್ ಸೈಟ್ ಗೆ ಭೇಟಿ ನೀಡಬೇಕು
- ಅಲ್ಲಿ ನೀವು ಕೆವೈಸಿ ಸೆಕ್ಷನ್ಗೆ ಹೋಗಿ ಎಲ್ಐಸಿ ಪಾಲಿಸಿ ಆಪ್ಶನ್ ಆಯ್ಕೆ ಮಾಡಿಕೊಳ್ಳಬೇಕು
- ನಿಮ್ಮ ಎಲ್ಐಸಿ ಪಾಲಿಸಿ ನಂಬರ್ ಸೇರಿ ವಿವಿಧ ಮಾಹಿತಿ ನೀಡಬೇಕು
- ನೀವು ನೀಡಿದ ಮಾಹಿತಿ ದೃಢೀಕರಣಗೊಂಡು, ಇಪಿಎಫ್ಒಗೆ ಎಲ್ಐಸಿ ಪಾಲಿಸಿ ಲಿಂಕ್ ಆದ ಬಳಿಕ ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತದೆ.
ಇದನ್ನೂ ಓದಿ; ನೀವು ಯಾವುದಾದರೂ ವಿಮಾ ಪಾಲಿಸಿದಾರರೇ? ಹಾಗಾದರೆ, ಈ ಸೆಕ್ಷನ್ ಬಗ್ಗೆ ತಿಳಿಯಿರಿ



















