ಹಾಸನ: ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅವರು ಅಕ್ರಮವಾಗಿ ಜಾಗ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ.
ಹಾಸನದ ವಿದ್ಯಾನಗರದಲ್ಲಿ ಯಶ್ ಅಮ್ಮ ಪುಷ್ಪ ಅವರ ಮನೆ ಇದ್ದು, ಅವರು ಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದ ಸೈಟ್‌ಗೆ ಕಾಂಪೌಡ್ ಹಾಕಿದ್ದಾರೆ ಎನ್ನಲಾಗಿದೆ. ಲಕ್ಷಮ್ಮ ಸಂಬಂಧಿ ದೇವರಾಜ್ ಎನ್ನುವವರು ಇದನ್ನು ಪ್ರಶ್ನಿಸಿ ಹಾಸನದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಹಾಸನ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯ ದೇವರಾಜ್ ಪರವಾಗಿ ಆದೇಶ ಮಾಡಿದ್ದಾರೆ. ಹಲವಾರು ಬಾರಿ ಕೋರ್ಟ್ ಸಮನ್ಸ್ ಹೊರಡಿಸಿದರೂ ಯಶ್ ತಾಯಿ ಕೋರ್ಟ್‌ಗೆ ಹೋಗದೆ ನ್ಯಾಯಾಲಯಕ್ಕೆ ದಾಖಲೆ ಒದಗಿಸದ ಹಿನ್ನಲೆ ದೇವರಾಜ್ ಪರ ಕೋರ್ಟ್ ಆದೇಶ ನೀಡಿದೆ.
ದೇವರಾಜ್ ಅವರು ಕೋರ್ಟ್ ಆದೇಶದಂತೆ ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಆದರೆ ದೇವರಾಜ್ ಮನವಿಗೆ ಸ್ಪಂದಿಸದ ಯಶ್ ತಾಯಿ ಸುಮ್ಮನಿದ್ದರು. ಈ ಹಿನ್ನಲೆ ಕೋರ್ಟ್ ಆದೇಶದಂತೆ ಮಾಲೀಕರು ಇಂದು ಬೆಳ್ಳಂ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಡ್ ತೆರವುಗೊಳಿಸಿದ್ದಾರೆ.
ಸುಮಾರು ಒಂದುವರೆ ಸಾವಿರ ಅಡಿಗೆ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದರು ಎಂದು ದೇವರಾಜು ಆರೋಪ ಮಾಡಿದ್ದಾರೆ. ಹಾಸನ ನಗರದ ವಿದ್ಯಾನಗರದಲ್ಲಿರುವ ಯಶ್ ರವರ ತಾಯಿ ಪುಷ್ಪಾ ರವರ ನಿವಾಸ ಸಮೀಪದಲ್ಲೇ ಈ ಘಟನೆ ನಡೆದಿದೆ.
ಇದನ್ನೂ ಓದಿ: ‘ಬ್ರೇಸ್‌ಲೇಟ್‌ನ ಎಂಗೇಜ್‌ಮೆಂಟ್‌ಗೆ ಕೊಡೋದು ನಮ್ಮನೆ ಸಂಪ್ರದಾಯ’ | ಕಾವ್ಯ ತಂದೆ ಕೊಟ್ಟ ಗಿಫ್ಟ್ ಬಗ್ಗೆ ಗಿಲ್ಲಿ ರಿಯಾಕ್ಟ್!



















