ಲಂಡನ್: ವಿಶ್ವಪ್ರಸಿದ್ಧ ಕಾಲಜ್ಞಾನಿ ಮೈಕೆಲ್ ಡಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳು ಪ್ರತಿ ವರ್ಷದ ಆರಂಭದಲ್ಲಿ ಚರ್ಚೆಗೆ ಗ್ರಾಸವಾಗುವುದು ಸಾಮಾನ್ಯ. ಅಡಾಲ್ಫ್ ಹಿಟ್ಲರ್‌ನ ಉದಯ, ಅಮೆರಿಕದಲ್ಲಿ ಸೆಪ್ಟೆಂಬರ್ 11ರ ಅವಳಿ ಕಟ್ಟಡಗಳ ಮೇಲಿನ ದಾಳಿ, ಕೊರೊನಾ ಸೋಂಕಿನಂತಹ ಘಟನೆಗಳನ್ನು ಮೊದಲೇ ಊಹಿಸಿದ್ದ ನಾಸ್ಟ್ರಾಡಾಮಸ್, 2026ರ ಸಾಲಿಗಾಗಿ ಕೆಲವು ಭಯಾನಕ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗಿದೆ.
1555ರಲ್ಲಿ ಪ್ರಕಟವಾದ ಅವರ ‘ಲೆಸ್ ಪ್ರೊಫೆಟೀಸ್’ ಪುಸ್ತಕದ ಆಧಾರದ ಮೇಲೆ 2026ರಲ್ಲಿ ಜಗತ್ತು ಏನೆಲ್ಲಾ ಎದುರಿಸಬಹುದು ಎಂಬ ವಿವರ ಇಲ್ಲಿದೆ.
- ಜನಪ್ರಿಯ ವ್ಯಕ್ತಿಯ ಸಾವು?
ನಾಸ್ಟ್ರಾಡಾಮಸ್‌ನ ಬರಹಗಳ ಪ್ರಕಾರ, 2026ರಲ್ಲಿ ಒಬ್ಬ ಪ್ರಬಲ ಅಥವಾ ಜನಪ್ರಿಯ ವ್ಯಕ್ತಿ “ಸಿಡಿಲು ಬಡಿದು” ಸಾವಿಗೀಡಾಗಬಹುದು ಎನ್ನಲಾಗಿದೆ. “ಶ್ರೇಷ್ಠ ವ್ಯಕ್ತಿಯೊಬ್ಬ ಹಗಲಿನಲ್ಲಿೇ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸಾಯುತ್ತಾನೆ,” ಎಂಬ ಸಾಲುಗಳನ್ನು, ಯಾರಾದರೂ ಪ್ರಮುಖ ರಾಜಕೀಯ ನಾಯಕನ ಹತ್ಯೆ ಅಥವಾ ಅಧಿಕಾರ ಕಳೆದುಕೊಳ್ಳುವ ಸೂಚನೆಯಾಗಿ ವಿಶ್ಲೇಷಿಸಲಾಗುತ್ತಿದೆ. - 7 ತಿಂಗಳುಗಳ ಮಹಾಯುದ್ಧ
“ಏಳು ತಿಂಗಳುಗಳ ಮಹಾಯುದ್ಧದಿಂದ ಜನರು ಸಾಯುತ್ತಾರೆ…” ಎಂಬ ಸಾಲುಗಳು ಜಾಗತಿಕ ಸಂಘರ್ಷದ ಸೂಚನೆಯಾಗಿವೆ. ಇದು ಎರಡು ಪ್ರಬಲ ರಾಷ್ಟ್ರಗಳ ನಡುವಿನ ಸಂಘರ್ಷವಾಗಿರಬಹುದು. ಅದು ಸುಮಾರು ಏಳು ತಿಂಗಳ ಕಾಲ ನಡೆಯಲಿದ್ದು, ಅಪಾರ ಸಾವುನೋವುಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. - ಸ್ವಿಟ್ಜರ್ಲೆಂಡ್‌ನಲ್ಲಿ ರಕ್ತಪಾತ?
ಶಾಂತಿಯುತ ದೇಶ ಸ್ವಿಟ್ಜರ್ಲೆಂಡ್‌ನ ಟಿಸಿನೊ ಪ್ರಾಂತ್ಯ “ರಕ್ತದಿಂದ ಉಕ್ಕಿ ಹರಿಯಲಿದೆ” ಎಂದು ಭವಿಷ್ಯ ನುಡಿಯಲಾಗಿದೆ. ಕಾಕತಾಳೀಯವೆಂಬಂತೆ, ಜನವರಿ 1 ರಂದು (ಗುರುವಾರ) ಸ್ವಿಟ್ಜರ್ಲೆಂಡ್‌ನ ಕ್ರ್ಯಾನ್ಸ್-ಮೊಂಟಾನಾದ ಬಾರ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹಲವರು ಮೃತಪಟ್ಟಿದ್ದು, ಕೆಲವರು ಇದನ್ನು ನಾಸ್ಟ್ರಾಡಾಮಸ್ ಭವಿಷ್ಯವಾಣಿಗೆ ತಳುಕು ಹಾಕುತ್ತಿದ್ದಾರೆ. - ‘ಜೇನುನೊಣ’ಗಳ ರೂಪದಲ್ಲಿ ಸರ್ವಾಧಿಕಾರಿಗಳ ಉದಯ?
“ಜೇನುನೊಣಗಳ ದೊಡ್ಡ ಹಿಂಡು ಏಳಲಿದೆ…” ಎಂಬ ನಿಗೂಢ ಸಾಲುಗಳು ರಾಜಕೀಯದಲ್ಲಾಗುವ ಬದಲಾವಣೆಯನ್ನು ಸೂಚಿಸುತ್ತವೆ. ಇಲ್ಲಿ ‘ಜೇನುನೊಣ’ ಅಥವಾ ಕೀಟಗಳು ಎಂಬುದನ್ನು ಸರ್ವಾಧಿಕಾರಿಗಳು ಅಥವಾ ಫ್ಯಾಸಿಸ್ಟ್ ಆಡಳಿತಗಳ ಉದಯ ಎಂದು ವಿಶ್ಲೇಷಿಸಲಾಗುತ್ತಿದೆ. - ನೌಕಾ ಯುದ್ಧದ ಭೀತಿ
“ಏಳು ಹಡಗುಗಳ ಸುತ್ತಲೂ ಮಾರಣಾಂತಿಕ ಯುದ್ಧ…” ಎಂಬ ಸಾಲುಗಳು ಸಮುದ್ರದಲ್ಲಿ ನಡೆಯುವ ಯುದ್ಧವನ್ನು ಸೂಚಿಸುತ್ತವೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಅದರ ನೆರೆಯ ರಾಷ್ಟ್ರಗಳಾದ ತೈವಾನ್, ವಿಯೆಟ್ನಾಂ, ಫಿಲಿಪ್ಪೀನ್ಸ್ ಮುಂತಾದವುಗಳ ನಡುವಿನ ಸಂಘರ್ಷವಾಗಿರಬಹುದು ಎಂದು ಊಹಿಸಲಾಗಿದೆ.
ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳು ಯಾವಾಗಲೂ ನಿಖರವಾಗಿರುವುದಿಲ್ಲವಾದರೂ, ಪ್ರಸ್ತುತ ಜಗತ್ತಿನ ವಿದ್ಯಮಾನಗಳನ್ನು ನೋಡುವಾಗ ಈ ಸಾಲುಗಳು ಜನರಲ್ಲಿ ಒಂದಷ್ಟು ಆತಂಕ ಮತ್ತು ಕುತೂಹಲವನ್ನಂತೂ ಹುಟ್ಟುಹಾಕಿವೆ.
ಇದನ್ನೂ ಓದಿ; ಮನೆ ಖಾಲಿ ಮಾಡುವಂತೆ ಹೇಳಿದ ನಿವೃತ್ತ ವಾಯುಪಡೆ ಅಧಿಕಾರಿಯನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಮಕ್ಕಳು!



















