ದಾವಣಗೆರೆ : ಉಪ್ಪು ಕದಿಯಲ್ಲ ಅಂತ ಹೊರಗೆ ಇಡುವ ವ್ಯಾಪಾರಸ್ಥರೇ ಎಚ್ಚರ. ಉಪ್ಪು ಕದ್ದರೆ ದಾರಿದ್ರ್ಯ ಬರುತ್ತೆ ಅನ್ನೋ ಜನರ ನಂಬಿಕೆಯೇ ಖದೀಮರಿಗೆ ಬಂಡವಾಳವಾಗಿದೆ. ಹೋಲ್‌ಸೇಲ್ ಕಿರಾಣಿ ಅಂಗಡಿ ಎದುರಿಟ್ಟಿದ್ದ ಉಪ್ಪಿನ ಚೀಲವನ್ನು ಕದ್ದೊಯ್ದಿರುವ ಘಟನೆ ದಾವಣಗೆರೆ ತಾಲೂಕಿನ ಹರಿಹರ ಪಟ್ಟಣದಲ್ಲಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಇಬ್ಬರು ಖದೀಮರು ಬಂದೊದ್ದು, ಹರಿಹರದ ಕೆ.ಆರ್.ನಗರ ಸೇರಿ ವಿವಿಧ ಕಿರಾಣಿ ಅಂಗಡಿಗಳ ಎದುರು ಇಟ್ಟಿದ್ದ ಹತ್ತಕ್ಕೂ ಹೆಚ್ಚು ಉಪ್ಪಿನ ಚೀಲಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಸಿಸಿ ಟಿವಿ ದೃಶ್ಯದ ಆಧಾರದ ಮೇಲೆ ಉಪ್ಪು ಕಳ್ಳರಿಗಾಗಿ ಹರಿಹರ ನಗರ ಠಾಣೆ ಪೊಲೀಸರು ಪರಿಶೀಲನೆ ಮಾಡಿತ್ತಿದ್ದಾರೆ.
ಇದನ್ನೂ ಓದಿ : ಹೊಸೂರು ಫ್ಲೈಓವರ್ ಮೇಲೆ ಮತ್ತೊಂದು ಸ್ಲೀಪರ್ ಬಸ್ ಅಪಘಾತ | ನಾಲ್ವರಿಗೆ ಗಾಯ!



















