ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಅವರ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನೇ ಹ್ಯಾಕ್ ಮಾಡಲಾಗಿದ್ದು, ಶಾಸಕರ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಲೂಟಿ ಮಾಡಲು ಸಂಚು ರೂಪಿಸಿದ ಘಟನೆ ಬಯಲಾಗಿದೆ.
ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್‌ಗಳು, ಶಾಸಕರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಹಲವು ವ್ಯಕ್ತಿಗಳಿಗೆ ಗೂಗಲ್ ಪೇ ಮೂಲಕ ತುರ್ತಾಗಿ ಹಣ ಕಳುಹಿಸುವಂತೆ ಸಂದೇಶ ರವಾನಿಸುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಾಸಕರು, ‘ಯಾರೂ ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಮತ್ತು ಹಣ ನೀಡಬೇಡಿ’ ಎಂದು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ನನ್ನ WhatsApp ಸಂಖ್ಯೆ 9945246366 Hack ಆಗಿದ್ದು, ಯಾವುದೇ ಹಣ ಕೇಳಿ ಬಂದ ಮೆಸೇಜ್ ದಯವಿಟ್ಟು Ignore ಮಾಡಿ ಎಂದು ಫೇಸ್‌ಬುಕ್ ಖಾತೆಯಲ್ಲಿ ಶಾಸಕರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಪೋಲಿಸರನ್ನೇ ಎಳೆದಾಡಿದ ಯುವಕರು | ಐವರ ಮೇಲೆ FIR



















