ಬೆಂಗಳೂರು : ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಕಳೆದೊಂದು ವಾರದಿಂದ ಚಳಿ ಹೆಚ್ಚಾಗಿತ್ತು ಇದೀಗ ಮೈಕೊರೆಯುವ ಚಳಿಯೊಂದಿಗೆ ದಟ್ಟ ಮಂಜು ಆವರಿಸಿದೆ.
ಆನೇಕಲ್-ಬನ್ನೇರುಘಟ್ಟ ರಸ್ತೆಯಲ್ಲಿ ಈ ಘೋರವಾದ ಮಂಜಿನಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಮಂಜಿನ ನಡುವೆ ವಾಹನಗಳು ಮರೆಯಾಗುತ್ತಿವೆ. ಹತ್ತಿರಕ್ಕೆ ಬರುವವರೆಗೂ ವಾಹನ ಕಾಣಲಾಗುತ್ತಿಲ್ಲ. ಇದರಿಂದ ಅಪಘಾತದ ಸಾಧ್ಯತೆ ಕೂಡ ಹೆಚ್ಚಾಗಿದೆ.
ಮೈ ಕೊರೆಯುವ ಚಳಿಯಿಂದಾಗಿ ಬೆಳಗ್ಗೆ 8.30ರವರೆಗೂ ಪಟ್ಟಣದಲ್ಲಿ ಜನರ ಓಡಾಟ ಕಡಿಮೆಯಿತ್ತು. ಪಟ್ಟಣದ ಎಎಸ್ಬಿ ಮೈದಾನದಲ್ಲಿ ವಾಯುವಿಹಾರ, ಜಾಗಿಂಗ್ ಹೋಗುವವರ ಸಂಖ್ಯೆ ವಿರಳವಾಗಿದೆ.
ಇದನ್ನೂ ಓದಿ : ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ | ಕಾಲ್ನಡಿಗೆ ಜಾಥಾ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ!



















