ಬೆಂಗಳೂರು : ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕರ್ನಾಟಕದ ವಿವಧ ಕಾರಾಗೃಹಗಳಲ್ಲಿ ಭಾರಿ ಕಾರ್ಯಾಚರಣೆ ನಡೆಸಲಾಗಿದ್ದು, ಕೈದಿಗಳಿಂದ ಹಲವಾರು ಮೊಬೈಲ್ ಫೋನ್‌ಗಳು, ಶಸ್ತ್ರಾಸ್ತ್ರಗಳು ಮತ್ತು ಇತರ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಸಿದ ವಿಶೇಷ ತಪಾಸಣೆಯಲ್ಲಿ 6 ಮೊಬೈಲ್ ಫೋನ್‌ಗಳು ಮತ್ತು 4 ಚಾಕುಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೇ, ಮೋಜು ಮಸ್ತಿ ಮಾಡುತ್ತಿದ್ದ ಕೈದಿಗಳಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಮೈಸೂರು ಜೈಲಿನಲ್ಲಿ 9 ಫೋನ್‌ಗಳು ಮತ್ತು 11 ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಬೆಳಗಾವಿ ಜೈಲಿನಲ್ಲಿ 4 ಫೋನ್‌ಗಳು ಮತ್ತು 366 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿಗಳು ಗಾಂಜಾವನ್ನು ಹೊರಗೆ ಎಸೆದಿದ್ದರು ಎನ್ನಲಾಗಿದೆ. ಮಂಗಳೂರು ಜೈಲಿನಲ್ಲಿಯೂ 4 ಮೊಬೈಲ್ ಫೋನ್ ಹಾಗೂ ವಿಜಯಪುರ ಜೈಲಲ್ಲಿಯೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ : IPL 2026 | ಕೆಕೆಆರ್ ಪಾಲಾದ ಕಾಂಗ್ರೆಸ್ ನಾಯಕ ಪಪ್ಪು ಯಾದವ್ ಪುತ್ರ.. ಮಗನ ಆಯ್ಕೆಗೆ ಭಾವುಕರಾದ ತಂದೆ!



















