ಬೆಂಗಳೂರು: ಟ್ರಾಫಿಕ್ ಕಂಟ್ರೋಲ್ ಮಾಡಲೆಂದು ನಗರದ ಗಾಂಧಿಬಜಾರ್‌ನಲ್ಲಿ ಹೋಸದಾಗಿ ನಿರ್ಮಾಣ ಮಾಡಿದ ಪಾರ್ಕಿಂಗ್ ಲಾಟ್‌ನಲ್ಲಿ ರಾತ್ರೋರಾತ್ರಿ ಕಮರ್ಷಿಯಲ್ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಗಾಂಧಿಬಜಾರ್‌ನಲ್ಲಿ ಅಧಿಕ ಟ್ರಾಫಿಕ್ ಸಮಸ್ಯೆ ಹಿನ್ನೆಲೆ, ಪಾಲಿಕೆಯ ಹಳೆ ಕಟ್ಟಡ ತೆರವು ಮಾಡಿ, ಹೊಸದಾಗಿ ಪಾರ್ಕಿಂಗ್ ಪ್ರದೇಶ ನಿರ್ಮಾಣ ಮಾಡಿದರೆ ಟ್ರಾಫಿಕ್ ಕಂಟ್ರೋಲ್ ಅಗುತ್ತದೆ ಎಂದು ಪಾರ್ಕಿಂಗ್ ಪ್ರದೇಶ ನಿರ್ಮಾಣಲಾಗಿತ್ತು.
ಅದರೆ ಉದ್ಘಾಟನೆಗೂ ಮುನ್ನ ಸ್ಥಳೀಯ ಇಂಜಿನಿಯರ್ ಕಿಕ್ ಬ್ಯಾಕ್ ಪಡೆದು ಮಳಿಗೆ ಕಟ್ಟುವುದಕ್ಕೆ ಖಾಸಗಿಯವರಿಗೆ ಜಾಗ ಮಂಜೂರು ಮಾಡಲಾಗಿದೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾ ಶಾಕ್ | ಕೃಷಿ ಇಲಾಖೆ ಜಂಟಿ ನಿರ್ದೇಶಕನ ಮನೆ ಮೇಲೆ ದಾಳಿ



















