ಉಡುಪಿ | ಡಿಸೆಂಬರ್ 17ರಿಂದ (ಬುಧವಾರ) ಪವಿತ್ರವಾದ ಧನುರ್ಮಾಸ ಆರಂಭವಾಗುತ್ತಿದೆ. ಜನವರಿ 14ರ ಮಕರ ಸಂಕ್ರಾಂತಿಯವರೆಗೆ ಈ ಮಾಸ ಇರಲಿದ್ದು, ಸೂರ್ಯನು ಗುರುವಿನ ರಾಶಿಯಾದ ಧನು ರಾಶಿಯನ್ನು ಪ್ರವೇಶಿಸುವ ಈ ಕಾಲ ಅತ್ಯಂತ ಪುಣ್ಯಕರವಾಗಿರುತ್ತದೆ.
ಧನುರ್ಮಾಸ ಹಿನ್ನೆಲೆ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಭಕ್ತಿ-ಭಾವದಿಂದ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ. ಅದರಂತೆ ಉಡುಪಿ ಜಿಲ್ಲೆಯ ಅರೆಹೊಳೆಯ ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ಹಾಗೂ ಪಾರ್ವತಿ ಅಮ್ಮನವರ ದೇವಸ್ಥಾನದಲ್ಲಿ ಬಹು ವಿಜೃಂಭಣೆಯಿಂದ ‘ಧನುರ್ಮಾಸ ಕಾರ್ಯಕ್ರಮ’ ನಡೆಯಲಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಧನುರ್ಮಾಸ ಕಾರ್ಯಕ್ರಮ’ದ ಸಮಯದಲ್ಲಿ ಶ್ರೀ ದೇವರಿಗೆ ಪ್ರತೀ ಸೋಮವಾರ ಬೆಳಿಗ್ಗೆ ಗಂಟೆ 5:00ರಿಂದ 6:00ರ ತನಕ ಸಂಕಲ್ಪ ಸಹಿತ ವಿಶೇಷ ಪೂಜೆ (ಹುಗ್ಗಿ ನೈವೇದ್ಯ) ನಡೆಯಲಿದೆ. ಹೀಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹುಗ್ಗಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ವ್ಯವಸ್ಥಾಪನಾ ಸಮಿತಿ ಕೋರಿದೆ.
ಧನುರ್ಮಾಸ ಕಾರ್ಯಕ್ರಮದ ವಿವರ |
22-12-2025ನೇ ಸೋಮವಾರ
29-12-2025ನೇ ಸೋಮವಾರ
05-01-2026ನೇ ಸೋಮವಾರ
12-01-2026ನೇ ಸೋಮವಾರ
ಸೇವಾ ವಿವರ |
ಒಂದು ಧನುರ್ಮಾಸ ಪೂಜೆ ರೂ. 100/-
ಇದನ್ನೂ ಓದಿ : ರಾಜಸ್ಥಾನದ ಈ ದೇವಾಲಯದಲ್ಲಿ ಪೂಜಿಸಲ್ಪಡುವುದು ದೇವರಲ್ಲ, ‘ಬುಲೆಟ್ ಬೈಕ್’! ಏನಿದರ ರಹಸ್ಯ?



















