ಅರುಣಾಚಲ ಪ್ರದೇಶ : ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಿಂದ ದಿನಗೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಇಂದು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಕಂದಕಕ್ಕೆ ಉರುಳಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. ಟ್ರಕ್ ಬೆಟ್ಟದ ರಸ್ತೆಯಿಂದ ಜಾರಿ ಸುಮಾರು 1,000 ಅಡಿಗಳಷ್ಟು ಕಡಿದಾದ ಕಮರಿಗೆ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ.
ಟಿನ್ಸುಕಿಯಾದ ಗೆಲಾಪುಖುರಿ ಟೀ ಎಸ್ಟೇಟ್‌ನ ಕಾರ್ಮಿಕರು ಕೆಲಸಕ್ಕಾಗಿ ಹಯುಲಿಯಾಂಗ್‌ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ನಡೆದಿದೆ. ಇನ್ನೂ ಎಲ್ಲಾ ಮೃತದೇಹಗಳನ್ನು ಹೊರತೆಗೆದಿಲ್ಲ. ಆದರೆ ಅವರೆಲ್ಲರೂ ಮೃತರಾಗಿದ್ದಾರೆ ಎನ್ನಲಾಗಿದೆ.
ಗುಡ್ಡಗಾಡು ಪ್ರದೇಶದ ಮೂಲಕ ಹೋಗುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದಾಗ ಈ ಅಪಘಾತ ಸಂಭವಿಸಿದೆ. ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು,ಸ್ಥಳೀಯ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಆ ಟ್ರಕ್ನಲ್ಲಿದ್ದವರನ್ನು ಹುಡುಕಲು ಆ ಸ್ಥಳಕ್ಕೆ ತಲುಪಿದ್ದಾರೆ.
ಇದನ್ನೂ ಓದಿ : ಸುಪ್ರೀಂ ಕೋರ್ಟ್ನಲ್ಲೂ ಪ್ರಜ್ವಲ್ ರೇವಣ್ಣಗೆ ಹಿನ್ನಡೆ | ಅತ್ಯಾಚಾರ ಕೇಸ್ ಬೇರೆ ಕೋರ್ಟ್‌ಗೆ ವರ್ಗಾವಣೆ ಕೋರಿದ್ದ ಅರ್ಜಿ ವಜಾ!



















