ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನೀಡಿರುವ ರಜತ್ ಅವರು ಸಖತ್ ವೈಲೆಂಟ್ ಆಗಿದ್ದಾರೆ. ಇದೀಗ ಮನೆಯೊಳಗೆ ಬಿಗ್ ಬಾಸ್ ಬದಲು ವಿಲನ್ ಎಂಟ್ರಿ ನೀಡಿದ್ದು, ಎಲ್ಲರ ಆಟದ ಶೈಲಿಯೂ ಬದಲಾಗಿದೆ. ಅದರಲ್ಲೂ ಒಂದು ವಾರ ಸೈಲೆಂಟ್ ಆಗಿದ್ದ ರಜತ್ ಅವರು ಈಗ ಸಖತ್ ವೈಲೆಂಟ್ ಆಗಿದ್ದಾರೆ. ಡಿಸೆಂಬರ್ 9ರ ಸಂಚಿಕೆಯಲ್ಲಿ ಸಿಕ್ಕಾಪಟ್ಟೆ ಅಗ್ರೆಸ್ಸಿವ್ ಆಗಿ ರಜತ್ ಆಟ ಆಡುತ್ತಿರುವುದಕ್ಕೆ ಪ್ರೋಮೋಗಳೇ ಸಾಕ್ಷಿ.
ಬಿಗ್ ಬಾಸ್ ಮನೆಯಲ್ಲಿ ಈಗ ಅಶ್ವಿನಿ ಗೌಡ ಮತ್ತು ರಜತ್ ಮಧ್ಯೆ ದೊಡ್ಡ ಜಗಳವಾಗಿದೆ. “ಧ್ರುವಂತ್ ಟಿ – ಗಾಂಚಲಿ ಎಂದಾಗಲೇ ಸುಮ್ಮನೆ ಇದ್ದ ಅಶ್ವಿನಿ ಗೌಡ ರಘು ಸರ್ ಒಂದು ಮಾತು ಹೇಳಿದ ತಕ್ಷಣ, ಹಂಗೆ ಹೇಳಬಾರದು, ಹಿಂಗೆ ಹೇಳಬಾರದು ಅಂತ ನಿಂತ್ಕೊಂಡ್ರು. ಅಲ್ಲದೆ, ಇವರ ಜೊತೆಗೆ ನಾವು ಫೈಟ್ ಕೂಡ ಆಡೋಕೆ ಆಗಲ್ಲ. ಸೋ ಬೆಟರ್ ಇವರು ಮನೆಗೆ ಹೋಗೋದು ಉತ್ತಮ” ಎಂದು ಅಶ್ವಿನಿ ಗೌಡ ಮೇಲೆ ಮಾತಿನ ಬಾಣ ಬಿಟ್ಟಿದ್ದಾರೆ ರಜತ್. ಇದಕ್ಕೆ ಅಶ್ವಿನಿ ಗೌಡ ಕಡೆಯಿಂದಲೂ ಪ್ರತ್ಯುತ್ತರ ಸಿಕ್ಕಿದೆ.
“ನಿಮ್ಮಷ್ಟು ಥರ್ಡ್ ರೇಟೆಡ್ ಭಾಷೆಯನ್ನು ಇಲ್ಲಿ ಇರೋರು ಯಾರೂ ಬಳಸಿಲ್ಲ. ನಾವು ಗಂಡಸರ ಜೊತೆಗೆ ಗುದ್ದಾಡ್ತಿವಿ ಅಂತೀರಿ. ನೀವು ಗಂಡಸಲ್ವಾ? ಕೇಳಬೇಕಿತ್ತು..” ಎಂದು ಅಶ್ವಿನಿ ಆವಾಜ್ ಹಾಕಿದ್ದಾರೆ. ಅದಕ್ಕೆ “ನಾವು ಹೊಡೆದಾಡಿದ್ರೆ ಗಂಡಸರ ಜೊತೆಗೆ ಹೊಡೆದಾಡೋದು” ಎಂದು ರಜತ್ ಮರುಉತ್ತರ ನೀಡಿದ್ದಾರೆ. ಬಳಿಕ ಅಶ್ವಿನಿ ಗೌಡ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿದ್ದಾರೆ. ನಂತರ ಅಶ್ವಿನಿ ಗೌಡ, “ಹೇ ಕಚಡಾ..” ಎಂದು ಅಬ್ಬರಿಸಿದ್ದಾರೆ. ಆಗ ರಜತ್, “ಹೇ ಕಚಡಾ…. ನೀನೇನು ನನಗೆ ಕಚಡಾ ಅಂತ ಹೇಳೋದು ಕಚಡಾ..” ಎಂದು ಕೌಂಟರ್ ಕೊಟ್ಟಿದ್ದಾರೆ. ಇವರಿಬ್ಬರ ಜಗಳ ತಾರಕಕ್ಕೇರಿದೆ.
ಇದನ್ನೂ ಓದಿ :ಒಪ್ಪೋ ಫೈಂಡ್ X9 ‘ವೆಲ್ವೆಟ್ ರೆಡ್’ ಆವೃತ್ತಿ ಬಿಡುಗಡೆ : ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ಬಣ್ಣದ ಫ್ಲ್ಯಾಗ್‌ಶಿಪ್ ಫೋನ್



















