ಬೆಂಗಳೂರು : ಭಾರತದಲ್ಲಿ ನೆಲೆಸಿರುವ ಡಚ್ ಮಹಿಳೆಯೊಬ್ಬರು ಬೆಂಗಳೂರಿನ ವಿಮಾನ ನಿಲ್ದಾಣವನ್ನು ಹೊಗಳಿದ್ದಾರೆ. ಇವಾನಾ ಎಂಬ ವಿದೇಶಿ ಮಹಿಳೆ, ವಿಮಾನ ನಿಲ್ದಾಣದ ಸಣ್ಣ ಕ್ಲಿಪ್ ಹಂಚಿಕೊಂಡು ಈ ಸ್ಥಳವು ಅನೇಕ ವಿದೇಶಿಯರು ಭಾರತದ ಬಗ್ಗೆ ಹೊಂದಿರುವ ಸ್ಟೀರಿಯೊಟೈಪ್‌ಗಳಿಂದ ದೂರವಿದೆ ಎಂದಿದ್ದಾರೆ. ಟರ್ಮಿನಲ್‌ನ ಅದ್ಭುತ ದೃಶ್ಯಗಳು, ಹಚ್ಚ ಹಸಿರಿನ ವಿಶಾಲವಾದ ಗಾಳಿಯಾಡುವ ಒಳಾಂಗಣ ಕಂಡು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಕಾಮೆಂಟ್ ಗಳು ಹರಿದು ಬಂದಿವೆ.
ivanaperkovicofficial ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಭಾರತವನ್ನು ಹಿಂದುಳಿದ ದೇಶ ಎಂದು ಕರೆಯುವುದನ್ನು ಕಲ್ಪಿಸಿಕೊಳ್ಳಿ ಆದರೆ ಇದು ಬೆಂಗಳೂರು ವಿಮಾನ ನಿಲ್ದಾಣ ಎಂದು ಕ್ಲಿಪ್‌ನಲ್ಲಿ ಬರೆಯಲಾಗಿದೆ. ಈ ಕ್ಲಿಪ್ ಟರ್ಮಿನಲ್‌ನ ಅದ್ಭುತ ದೃಶ್ಯಗಳು, ಹಚ್ಚ ಹಸಿರಿನ ವಿಶಾಲವಾದ, ಗಾಳಿಯಾಡುವ ಒಳಾಂಗಣಗಳನ್ನು ಒಳಗೊಂಡಿರುವುದನ್ನು ಕಾಣಬಹುದು. ಇದು ಮೊದಲ ಬಾರಿಗೆ ಭೇಟಿ ನೀಡುವವರನ್ನು ಅಚ್ಚರಿಗೊಳಿಸುತ್ತದೆ ಎಂದು ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಬೆಂಗಳೂರು ಹಾಗೂ ದೆಹಲಿ ವಿಮಾನ ನಿಲ್ದಾಣಗಳು ಅತ್ಯುತ್ತಮವಾಗಿವೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅದಕ್ಕಾಗಿಯೇ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ. ಇನ್ನೊಬ್ಬ ಬಳಕೆದಾರ ನಮ್ಮ ಹೆಮ್ಮೆಯ ಕರ್ನಾಟಕ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ :ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು | ಮೂವರು ದುರ್ಮರಣ!



















