ಬಳ್ಳಾರಿ: ದಕ್ಷಿಣ ಕಾಶಿ ಹಂಪಿಯಲ್ಲಿ ಅದ್ಧೂರಿ ಫಲಪೂಜಾ ಮಹೋತ್ಸವ ನಡೆಯಿತು. ಪಂಪಾಂಬಿಕೆ- ಶ್ರೀ ವಿರೂಪಾಕ್ಷನ ನಿಶ್ಚಿತಾರ್ಥವಾಗುವುದೇ ಫಲಪೂಜಾ ಮಹೋತ್ಸವ ಆಗಿದ್ದು, ಫಲಪೂಜಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿ ಶ್ರೀವಿರೂಪಾಕ್ಷನ ದರ್ಶನ ಪಡೆದರು.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಐತಿಹಾಸಿಕ ತಾಣ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದಿಂದ ಫಲಪೂಜಾ ಮಹೋತ್ಸವದ ಮೆರವಣಿಗೆ ಸಾಗಿತ್ತು. ಆ ಬಳಿಕ ಕೊದಂಡರಾಮ ದೇಗುಲದಲ್ಲಿ ಫಲಪೂಜಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಕೊರೆಯುವ ಚಳಿಯನ್ನು ಲೆಕ್ಕಿಸದೇ ವಿಜಯನಗರ, ಬಳ್ಳಾರಿ, ಕೊಪ್ಪಳ ಸೇರಿದಂತೆ ನೇರೆಯ ರಾಜ್ಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಫಲಪೂಜಾ ಮಹೋತ್ಸವದಲ್ಲಿ ಬಾಗಿಯಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಜಯನಗರ ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ : 20,000 ರನ್‌ಗಳ ಮೈಲಿಗಲ್ಲು ಸ್ಥಾಪಿಸಿದ ರೋಹಿತ್ ಶರ್ಮಾ : ದಿಗ್ಗಜರ ಎಲೈಟ್ ಪಟ್ಟಿಗೆ ಸೇರಿದ ಹಿಟ್‌ಮ್ಯಾನ್



















