ಸದ್ಯ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಾಗುತ್ತಿದ್ದಂತೆ, ನಾಮಿನೇಷನ್ ಭರಾಟೆ ಶುರುವಾಗಿದೆ. ಸೀಸನ್ 11ರಲ್ಲಿ ಬಳಸಲಾದ ಬೆನ್ನಿಗೆ ಕಟ್ಟಿಕೊಂಡಿರುವ ಅರ್ಧವೃತ್ತಾಕಾಲದ ಹಲಗೆಗೆ ಚೂರಿ ಹಾಕುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕು. ಅತ್ಯಧಿಕ ಚೂರಿ ಪಡೆದವರು ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗುತ್ತಾರೆ.

ರಕ್ಷಿತಾ ಶೆಟ್ಟಿ ಅವರು ತಮ್ಮ ಅನಿಸಿಕೆಗಳನ್ನು ಮುಲಾಜಿಲ್ಲದೇ ಹೇಳುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಕಾವ್ಯ ಬೆನ್ನಿಗೆ ರಕ್ಷಿತಾ ಶೆಟ್ಟಿ ಚೂರಿ ಹಾಕಿದ್ದಾರೆ. ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಆ ಮೂಲಕ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎಂಬುದನ್ನು ತಿಳಿಯಲು ಪೂರ್ತಿ ಸಂಚಿಕೆ ನೋಡಬೇಕು.

ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಮಾತಿನ ಚಕಮಕಿಯನ್ನು ತೋರಿಸಲಾಗಿದೆ. ಇಬ್ಬರು ಒಬ್ಬರ ಮೇಲೆ ಮತ್ತೊಬ್ಬರ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಹಾಗಾಗಿ ಇಬ್ಬರಲ್ಲಿ ಯಾರು ಸ್ಟ್ರಾಟಜಿ ಮಾಡೋರು ಎಂದು ವೀಕ್ಷಕರು ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಅರಶಿನ ಶಾಸ್ತ್ರಕ್ಕೆ ಬ್ಲಿಂಕಿಟ್ ಯೂನಿಫಾರ್ಮನಲ್ಲಿ ಹೋದ ಸ್ನೇಹಿತ ; ವಿಡಿಯೋ ವೈರಲ್



















