ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಳೆದೊಂದು ವಾರದಿಂದ ಚಳಿ ಹೆಚ್ಚಾಗಿದೆ. ಕನಿಷ್ಟ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇಂತಹ ಮೈಕೋರೆಯುವ ಚಳಿಗೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕ್ತಿದ್ದಾರೆ. ಈ ನಡುವೆ ಇಂದು ಮುಂಜಾನೆಯಿಂದಲೇ ಸುರಿದ ಮಳೆಗೆ ಬೆಂಗಳೂರು ಕೂಲ್ ಕೂಲ್ ಆಗಿದ್ದು, ವೀಕೆಂಡ್ ಮೂಡಿನಲ್ಲಿದ್ದ ಸಿಟಿ ಮಂದಿಗೆ ಮಳೆ ಕೊಂಚ ಅಡ್ಡಿಯಾಗಿದೆ.
ಚಳಿಯ ನಡುವೆ ಮಳೆಯಾಗಿದ್ದು ಬೆಳ್ಳಂಬೆಳಗೆ ವಾಹನ ಸವಾರರು ಹೊರ ಬರಲು ಪರದಾಡಿದರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಚಳಿ ತೀವ್ರಗೊಂಡಿದೆ. ಮಧ್ಯಾಹ್ನದ ಸಮಯದಲ್ಲೂ ಮೈ ನಡುಗಿಸುತ್ತಿದೆ. ಒಂದೆಡೆ ಮಳೆ ಮತ್ತೊಂದೆಡೆ ಚಳಿ ಹೆಚ್ಚಾಗಿದ್ದು ಸಿಟಿ ಮಂದಿ ಈ ವಾತಾವರಣಕ್ಕೆ ಹೈರಾಣಾಗಿದ್ದಾರೆ.ಈ ತಣ್ಣನೆಯ ವಾತಾವರಣ ಇಂದು ಕೂಡ ಮುಂದುವರಿಯಲಿದೆ.
ನೈರುತ್ಯ ಬಂಗಾಳಕೊಲ್ಲಿಯಲ್ಲಿ ಮತ್ತು ಶ್ರೀಲಂಕಾ ಕರಾವಳಿ ಭಾಗದಲ್ಲಿ ದಿತ್ವಾ ಚಂಡಮಾರುತ ಎಫೆಕ್ಟ್‌ನಿಂದ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ. ಮುಂದಿನ ಎರಡ್ಮೂರು ದಿನಗಳು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ಕಳೆದ ವರ್ಷಕ್ಕಿಂತ ಈ ವರ್ಷ ಶೀತಗಾಳಿ ತೀವ್ರವಾಗುತ್ತಿದ್ದು, ಬೆಂಗಳೂರಿನಲ್ಲಿ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ. ನಿನ್ನೆ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇಂದು 18 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದೆಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.
ಮುಂಬರುವ ದಿನಗಳಲ್ಲಿ ಚಳಿಯು ಮತ್ತಷ್ಟು ಹೆಚ್ಚಾಗಲಿದೆ.ಈಗಾಗಲೇ ಚಳಿಗೆ ಜನರು ಅಯ್ಯೋ ಚಳಿ ಅಂತಾ ಮನೆಯಿಂದ ಹೊರ ಬರಲು ಹಿಂದೇಟು ಹಾಕ್ತಿದ್ದಾರೆ..ವಾಕಿಂಗ್‌ಗೆ ಬರುವವರು ಚಳಿಗೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದು ವಾಕಿಂಗ್ ಹೋಗುವ ಜನರ ಸಂಖ್ಯೆ ಕಡಿಮೆ ಆಗಿದೆ. ಬೆಳ್ಳಂಬೆಳಗ್ಗೆ ದಟ್ಟ ಮಂಜು, ಮೈ ಕೊರೆಯುವ ಚಳಿಯಲ್ಲೂ ಕೆಲವರು ಬೆಚ್ಚನೆಯ ಸ್ವೆಟರ್, ಕಿವಿಗೆ ಕ್ಯಾಪ್ ಹಾಕಿಕೊಂಡು ವಾಕಿಂಗ್, ಜಾಗಿಂಗ್‌ಗೆ ಬರುತ್ತಿದ್ದಾರೆ. ಮಾತ್ರವಲ್ಲದೇ ಈ ಚಳಿಗೆ ಹೆಚ್ಚಾಗಿ ಕಾಫಿ, ಟೀ ಯತ್ತ ಮೊರೆ ಹೋಗ್ತಿದ್ದಾರೆ. ಜನವರಿಯಲ್ಲಿ ಶೀತಗಾಳಿ ಉತ್ತುಂಗಕ್ಕೇರುವ ನಿರೀಕ್ಷೆಯಿದ್ದು, ಮಕ್ಕಳು, ಹಿರಿಯರು, ಗರ್ಭಿಣಿಯರು ಅಗತ್ಯ ಮುನ್ನೆಚ್ಚರಿಕೆಗಳಿಂದ ಇರಬೇಕು.
ಇದನ್ನೂ ಓದಿ : ಗಂಭೀರ್ ಪ್ರಯೋಗ ಶಾಲೆ : ‘ಸಂಗೀತ ಕುರ್ಚಿ’ ಆಟ ರಾಂಚಿಯಲ್ಲೂ ಮುಂದುವರಿಯುವುದೇ?



















