ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ಸಿನಿಮಾ ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಗೊಂಡಿದೆ. ವರದಿಗಳ ಪ್ರಕಾರ ಚಿತ್ರ ಇಂದು, ಈಗಾಗಲೇ ಪ್ರದರ್ಶನಗೊಂಡಿದೆ.
ಈ ಬಗ್ಗೆ ಕಳೆದ ಸಂಜೆ ಪೋಸ್ಟ್ ಶೇರ್ ಮಾಡಿದ್ದ ಚಿತ್ರತಂಡ, ”ನಮ್ಮ ಮೂಲದಿಂದ ರಾಷ್ಟ್ರಮಟ್ಟದ ವೇದಿಕೆವರೆಗೆ. ಸು ಫ್ರಮ್ ಸೋ – ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗಕ್ಕೆ ತಲುಪಿದೆ. ಇಡೀ ತಂಡಕ್ಕೆ ಹೆಮ್ಮೆಯ ಕ್ಷಣ” ಎಂದು ಬರೆದುಕೊಂಡಿದೆ.
ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು, ”ನಿಮ್ಮ ಸ್ಕ್ರಿಪ್ಟ್ ರೈಟಿಂಗ್ ಬಲೆ ತೆಲಿಪಾಲೆಯಲ್ಲಿ ನನಗೆ ಇಷ್ಟವಾಗಿತ್ತು, ತುಳುನಾಡಿನ ಕಥೆ, ಜಗತ್ತಿನಾದ್ಯಂತ ಪಸರಿಸಿದ್ದು ನಮಗೆ ತುಂಬಾ ಹೆಮ್ಮೆ, ಖುಷಿಯ ವಿಚಾರ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ ; ಸ್ಮೃತಿ ಮಂಧಾನಾ ತಂದೆಗೆ ಹೃದಯಾಘಾತ | ಇಂದು ನಡೆಬೇಕಿದ್ದ ವಿವಾಹ ಮುಂದೂಡಿಕೆ..!



















