ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಹಾಡುಹಗಲೆ ನಡೆದ ದರೋಡೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್, ಎರಡೂವರೆ ವರ್ಷಗಳಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಗಾಗಿದ್ದು, ಜನ ಸಾಮಾನ್ಯರಿಗೆ ರಕ್ಷಣೆ ಇಲ್ಲದಂತೆ ಆಗಿದ್ದು, ಜನರಲ್ಲಿ ಆತಂಕ ಶುರುವಾಗಿದೆ. ನಿತ್ಯವು ಸಾಕಷ್ಟು ಪ್ರಕರಣಗಳು ನೋಡುತ್ತಾ ಇದ್ದೇವೆ. ಗೃಹ ಸಚಿವರಿಗೆ ಏನೇ ಕೇಳಿದರು ಗೊತ್ತಿಲ್ಲ ಎಂದು ಹೇಳುತ್ತಾರೆ. ಇದು ದಿಕ್ಕು-ದೆಸೆ ಇಲ್ಲದ ಸರ್ಕಾರ ಆಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಆಡಳಿತ ವೈಫಲ್ಯಗಳು ಇದ್ದಾಗ, ರೌಡಿಸಂ, ದಡೋರೆ, ಕಳ್ಳತನ ಮಾಡುವವರಿಗೆ ಪಾಠ ಕಲಿಸುವುದಿಲ್ಲ. ಅಲ್ಲಿವರೆಗೂ ಅವರು ಮೋಟಿವೇಶನ್ ಆಗಿ ಇದನ್ನು ತಗೆದುಕೊಳ್ಳುತ್ತಾರೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಈ ಘಟನೆಯನ್ನು ಗೃಹ ಸಚಿವರು ಗಂಭೀರವಾಗಿ ತೆಗೆದುಕೊಂಡು, ಮುಂದೆ ಹೀಗೆ ಆಗದಂತೆ ಹೇಗೆ ಎಚ್ಚರವಹಿಸುತ್ತಾರೆ ಎಂಬುದನ್ನು ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಕೆ ವಿಚಾರವಾಗಿ ಮಾತನಾಡಿ, ಜಾಹಿರಾತು ಕೊಟ್ಟಿದ್ದು, ಭ್ರಷ್ಟಾಚಾರ ಮಾಡಿದ್ದೇ ಕಾಂಗ್ರೆಸ್ ಪಕ್ಷದ 2.5 ವರ್ಷದ ಸಾಧನೆ., 2.5 ವರ್ಷದಲ್ಲಿ ಈ ಸರ್ಕಾರದ ಸಾಧನೆ ಏನು ಇಲ್ಲ. ಜಾಹಿರಾತು ಕೊಟ್ಟಿದ್ದೇ ಈ ಸರ್ಕಾರದ ಸಾಧನೆ. ಜಾಹಿರಾತಿಗೆ ಸೀಮಿತ ಆಗಿರುವ ಸರ್ಕಾರವಿದು. 7 ಕೋಟಿ ಕನ್ನಡಿಗರ ತೆರಿಗೆ ಹಣ ಜಾಹೀರಾತಿಗೆ ಸ್ವೇಚ್ಚಾಚಾರವಾಗಿ ಬಳಕೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದು ಬಾಯಲ್ಲಿ ಹೇಳುವುದು ಬೇಡ. ಏನ್ ಮಾಡಿದ್ದಾರೆ ಎಂದು ತೋರಿಸಲಿ. ಭ್ರಷ್ಟಾಚಾರ ಎಷ್ಟು ಅಗಿದೆ. ತನ್ನ ಬೆನ್ನು ತಾನೇ ತಟ್ಟಿಕೊಳ್ಳುವುದಲ್ಲ. ಜನರ ಮನಸು ಗೆಲ್ಲುವ ಕೆಲಸ ಈ ಸರ್ಕಾರ ಮಾಡಿಲ್ಲ. ಅವರ ಆತ್ಮಸಾಕ್ಷಿಗೆ ಅವರೇ ಪ್ರಶ್ನೆ ಮಾಡಿಕೊಳ್ಳಲಿ. ಈ ಸರ್ಕಾರದ ಮೇಲೆ ಜನರಿಗೆ ನೆಮ್ಮದಿ, ಸಮಾಧಾನ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ
ಇದನ್ನೂ ಓದಿ: ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ.. ಅದೃಷ್ಟ ಇದ್ರೆ ನಮ್ಮಣ್ಣ ಡಿಕೆಶಿ ಸಿಎಂ ಆಗ್ತಾರೆ | ಡಿ.ಕೆ.ಸುರೇಶ್



















