ಇತ್ತೀಚೆಗೆ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ನಿರ್ದೇಶಿಸಿರುವ ‘ವಾರಣಾಸಿ’ ಸಿನಿಮಾದ ದೊಡ್ಡ ಈವೆಂಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ರಾಜಮೌಳಿ ಅವರು ಹಿಂದೂ ಭಾವನೆಗೆ ಧಕ್ಕೆ ತಂದ ಆರೋಪ ಕೇಳಿಬಂದಿದೆ. ಈ ಸಂಬಂಧ ಇದೀಗ ರಾಜಮೌಳಿ ವಿರುದ್ಧ ದೂರು ದಾಖಲಾಗಿದೆ.
‘ವಾರಣಾಸಿ’ ಟೈಟಲ್ ಲಾಂಚ್ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸರಿಯಾದ ಸಮಯಕ್ಕೆ ಟೀಸರ್ ಪ್ರದರ್ಶನ ಮಾಡಲು ಸಾಧ್ಯವಾಗಲೇ ಇಲ್ಲ. ಈ ಬಗ್ಗೆ ರಾಜಮೌಳಿಗೆ ಬೇಸರ ಉಂಟಾಗಿದೆ. ಹೀಗಾಗಿ, ಹನುಮಾನ್ ದೇವರನ್ನು ರಾಜಮೌಳಿ ದೂಷಿಸಿದ್ದಾರೆ. ‘ಹನುಮಂತ ಒಳ್ಳೇದು ಮಾಡ್ತಾನೆ ಎಂದು ತಂದೆ ಹೇಳಿದ್ರು. ಆದರೆ, ಒಳ್ಳೇದು ಮಾಡೋದು ಅಂದ್ರೆ ಹೀಗೇನಾ’ ಎಂದು ರಾಜಮೌಳಿ ಪ್ರಶ್ನೆ ಮಾಡಿದ್ದರು. ತಾಂತ್ರಿಕ ದೋಷ ಉಂಟಾಗಿದ್ದಕ್ಕೆ ಹನುಮಂತ ಕಾರಣ ಎಂದು ರಾಜಮೌಳಿ ಹೇಳಿದ್ದರು. ಇದರಿಂದ ಸಿಟ್ಟಾಗಿರೋ ರಾಷ್ಟ್ರೀಯ ವಾನರ ಸೇನಾ ಅವರು ಹೈದರಾಬಾದ್ನ ಸರೂರ್ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
‘ರಾಜಮೌಳಿ ಅವರ ಹೇಳಿಕೆ ಹಿಂದೂಗಳ ಭಾವನೆಗೆ ಸಾಕಷ್ಟು ಧಕ್ಕೆ ತಂದಿದೆ. ಸಿನಿಮಾ ರಂಗದಲ್ಲಿ ಹಿಂದೂ ದೇವರನ್ನು ಅಗೌರವಿಸುವ ಪ್ರವೃತ್ತಿ ಹೆಚ್ಚುತ್ತಲೇ ಇದೆ. ಹೀಗಾಗಿ, ಈ ದೂರು ಆಧರಿಸಿ ಕೇಸ್ ದಾಖಲಿಸಿಕೊಳ್ಳಬೇಕು ಮತ್ತು ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಬೇಕು’ ಎಂದು ದೂರುದಾರರು ಕೋರಿದ್ದಾರೆ. ಸರೂರ್ ನಗರ ಪೊಲೀಸರು ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : 26 ಭೀಕರ ದಾಳಿಗಳ ಸೂತ್ರಧಾರ, ಕುಖ್ಯಾತ ಮಾವೋವಾದಿ ಕಮಾಂಡರ್ ಮದ್ವಿ ಹಿಡ್ಮಾ ಹತ್ಯೆ



















