ಬೆಂಗಳೂರು : ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಬೃಹತ್ ಜಾಲವೊಂದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪತ್ತೆಯಾಗಿದೆ. ಸಿಸಿಬಿ ಪೊಲೀಸರು ಮತ್ತು ಕೆಎಂಎಫ್ ಜಾಗೃತ ದಳ ಜಂಟಿ ಕಾರ್ಯಾಚರಣೆ ನಡೆಸಿ ಈ ಬೃಹತ್ ಜಾಲ ಪತ್ತೆ ಮಾಡಿದ್ದು, ಕೆಎಂಎಫ್ ವಿತರಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮಹೇಂದ್ರ, ದೀಪಕ್, ಮುನಿರಾಜು, ಅಭಿ ಅರಸು ಬಂಧಿತರು. ಆರೋಪಿಗಳೀಂದ ಒಟ್ಟು 1.50 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪವನ್ನು ಜಪ್ತಿ ಮಾಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ನಕಲಿ ತುಪ್ಪ ಶೇಖರಣೆ ಮಾಡ್ತಿದ್ದ ಬೆಂಗಳೂರಿನ ಚಾಮರಾಜಪೇಟೆಯ ಗೋಡೌನ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಕ್ಯಾಚೆಟ್ ಮತ್ತು ಪ್ಲ್ಯಾಸ್ಟಿಕ್ ಬಾಟಲ್‌ನಲ್ಲಿ ತುಂಬಿ ನಗರದಾದ್ಯಂತ ನಕಲಿ ತುಪ್ಪ ಮಾರಾಟ ಮಾಡ್ತಿದ್ದ ಬೃಹತ್ ಜಾಲಾ ಪತ್ತೆಯಾಗಿದೆ. ಆರೋಪಿಗಳು ನಂದಿನಿ ಪಾರ್ಲರ್‌ಗಳಿಗೂ ಕಲಬೆರೆಕೆ ತುಪ್ಪಗಳನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಅಸಲಿ ನಂದಿನಿ ತುಪ್ಪದ ಬೆಲೆಗೆ ನಕಲಿ ತುಪ್ಪ ಮಾರಾಟ ಮಾಡ್ತಿದ್ದು, ತನಿಖೆ ವೇಳೆ ಬೆಳಕಿಗೆ ಬಂದಿದೆ.
ಎರೆಡು ವರ್ಷಗಳಿಂದ ಕೃತ್ಯ : ಸೀಮಂತ್ ಕುಮಾರ್ ಸಿಂಗ್
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ಕೆಎಂಎಫ್ ಜಾಗೃತ ದಳ ಕಡೆಯಿಂದ ನಮಗೆ ಮಾಹಿತಿ ಬಂದಿತ್ತು. ಜಂಟಿಯಾಗಿ ಈ ಪ್ರಕರಣ ಪತ್ತೆ ಮಾಡಿದ್ದೇವೆ. ಮೂರು ಜನರನ್ನು ನಾವು ಅರೆಸ್ಟ್ ಮಾಡಿದ್ದೇವೆ. ಒಬ್ಬನಿಗೆ ಪ್ರಶ್ನೆ ಮಾಡಿದ್ದೇವೆ. ನಂದಿನಿ ತುಪ್ಪ, ಹಾಲಿನ ಉತ್ಪನ್ನಗಳನ್ನ ನಕಲಿ ಮಾಡುತ್ತಿರುವುದು ಗೊತ್ತಾಗಿದೆ ಎಂದರು.
ಮಷಿನ್ ಯೂನಿಟ್ ತಮಿಳುನಾಡಿನ ತಿರುಪೂರು ಜಿಲ್ಲೆಯಲ್ಲಿತ್ತು. ಅಲ್ಲಿಯೂ ರೈಡ್ ಆಗಿದೆ, ಬೆಂಗಳೂರಿನಲ್ಲಿ ಕೂಡ ರೈಡ್ ಆಗಿದೆ. ಒಂದು ಕೋಟಿಗೂ ಅಧಿಕ ಬೆಲೆಬಾಳುವ ವಸುಗಳು ಸೀಜ್ ಆಗಿದೆ. ಮುಖ್ಯ ಆರೋಪಿ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪ್ರಾಥಮಿಕ ಹಂತದ ತನಿಖೆಯಲ್ಲಿ 2018ರಲ್ಲೂ ಇದನ್ನ ಮಾಡಿದ್ದಾರೆ. ಇಲ್ಲಿಂದ ಅಸಲಿ ತುಪ್ಪ ಖರೀದಿ ಮಾಡಿ ಅಲ್ಲಿಂದ ಕಲಬೆರಕೆ ಮಾಡಿ ಕುಳುಹಿಸುತ್ತಿದ್ದರು. ಎರೆಡು ವರ್ಷಗಳಿಂದ ಈ ಕೃತ್ಯ ಮಾಡುತ್ತಿದ್ದರು ಎಂಬುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ‘ಲವ್ ಓಟಿಪಿ’ ಸಿನಿಮಾಗೆ ನೀರಸ ಪ್ರತಿಕ್ರಿಯೆ | ಬಿಕ್ಕಿ ಬಿಕ್ಕಿ ಅತ್ತ ನಟ ಅನೀಶ್!



















