ಕೊಪ್ಪಳ : ಸುಳ್ಳು ಕಂಪ್ಲೇಟ್ ಕೊಟ್ಟರೆ ಜೈಲಿಗೆ ಹಾಕಿಸುತ್ತೇನೆ ಎಂದು ಕಂಪ್ಲೇಟ್ ಕೊಡಲು ಬಂದ ವ್ಯಕ್ತಿಗೆ ಉಪಲೋಕಾಯುಕ್ತ ವೀರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ.
ಕೊಪ್ಪಳದ ಜಿಲ್ಲಾಆಡಳಿತ ಭವನದಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ ಕಂಪ್ಲೇಟ್ ಕೊಡಲು ಬಂದ ಮಂಜುನಾಥ ಎಂಬುವವನ ಮೇಲೆ ಉಪಲೋಕಾಯುಕ್ತ ವೀರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುಳ್ಳು ದಾಖಲಾತಿ ಕೊಟ್ಟು ಅಂಗವಿಕಲವೆಂದು ಪ್ರಮಾಣ ಪತ್ರ ನೀಡಿ ನೌಕರಿ ಪಡೆದಿದ್ದಾರೆ ಎಂದು ದೂರು ನೀಡಲು ಬಂದಿದ್ದ ಮಂಜುನಾಥ್‌ಗೆ ಉಪಲೋಕಾಯುಕ್ತರು ನಿಮಗೇನು ಹೊಟ್ಟೆಕಿಚ್ಚು, ಸುಳ್ಳು ಕೇಸ್ ನೀಡಿದರೆ ಮೂರು ತಿಂಗಳು ಜೈಲಿಗೆ ಹಾಕಿಸುತ್ತೇನೆ, ತಪ್ಪೋಪ್ಪಿಗೆ ಬರೆದುಕೊಡು ಎಂದು ಹೇಳಿದ್ದಾರೆ. ಆ ಬಳಿಕ ಸುಮ್ಮನಾದ ಮಂಜುನಾಥ್, ತಪ್ಪೋಪ್ಪಿಗೆ ಬರೆದುಕೊಟ್ಟಿದ್ದಾನೆ.
ಇದನ್ನೂ ಓದಿ : ಛೇ, ಇದೆಂಥಾ ಕ್ರೌರ್ಯ.. ವಿದ್ಯುತ್ ಬಿಲ್ ಕಟ್ಟಿಲ್ಲವೆಂದು ಸಿಎಂ ತವರು ಜಿಲ್ಲೆಯಲ್ಲೇ ಅಂಧ ವೃದ್ಧೆ ಮೇಲೆ ಹಲ್ಲೆ!



















