ಬೆಂಗಳೂರು: ಕೆ.ಎಚ್ ಮುನಿಯಪ್ಪ ಮುಖ್ಯಮಂತ್ರಿ ಆದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಜಿ ಪರಮೇಶ್ವರ್, ಮುನಿಯಪ್ಪ ಅವರು ಸಿಎಂ ಆಗುವುದಾದರೆ ನಾನು ಸಂತೋಷ ಪಡುತ್ತೇನೆ ಎನ್ನುವ ಮೂಲಕ ಗೃಹ ಸಚಿವರು ರಾಜ್ಯದಲ್ಲಿ ʼದಲಿತ ಸಿಎಂʼ ದಾಳ ಉರುಳಿಸಿದ್ದಾರೆ.
ತುಳಿತಕ್ಕೆ ಒಳಗಾಗಿರುವ ವರ್ಗಕ್ಕೆ ಆಡಳಿತ ಬೇಕಿದೆ. ಆ ವರ್ಗಕ್ಕೆ ಆಡಳಿತ ಸಿಗುತ್ತದೆ ಎಂದರೆ ಸಂತೋಷ. ಆದರೆ ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮುನಿಯಪ್ಪ ಅವರು ಎರಡು ಬಾರಿ ಎಂಪಿ ಆಗಿದ್ದಾರೆ. ಎರಡು ಬಾರಿ ಎಂಪಿಯಾಗಿರುವುದು ಸಾಮಾನ್ಯವಲ್ಲ. ಅವರು ಹಿರಿಯರಿದ್ದಾರೆ. ಅವರು ಕೇಂದ್ರದಲ್ಲಿ ಕೂಡ ಸಚಿವರಾಗಿದ್ದರು. ಕೇಂದ್ರದಲ್ಲಿ ಸಚಿವರಾದ ಬಳಿಕ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ ಅವರು ಸಮರ್ಥರಿದ್ದು ಅವರಿಗೆ ಸಿಎಂ ಆಗುವ ಅರ್ಹತೆ ಇದೆ. ಅವರು ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ ಎಂದಿದ್ದಾರೆ.
ಈಗ ಬಿಹಾರ ಎಲೆಕ್ಷನ್ ನಡೆಯುತ್ತಿದೆ. ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆ ಆಗುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಟಗಾರ್ತಿಯರ ಮೇಲಿನ ದೌರ್ಜನ್ಯ ಅವರಿಗೊಂದು ಪಾಠ: ಸಚಿವ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ



















