ಬೆಂಗಳೂರು : ಗಾಂಧಿನಗರ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಇಂದು ಸಿಎಂ ಸಿದ್ದರಾಮಯ್ಯ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬಳಿಕ ಮಾತಾಡಿದ ಅವರು, ಸಂಸದ ತೇಜಸ್ವಿ ಸೂರ್ಯ ಅವ್ರನ್ನ ಅಮಾವಾಸ್ಯೆ ಎಂದಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ನರೇಂದ್ರ ಮೋದಿ ಎಷ್ಟು ಒಳ್ಳೆಯವರಾಗಿ ಕಾಣ್ತಾರೋ ಅಷ್ಟೇ ದ್ವೇಷ ಅವರಿಗೆ ಕರ್ನಾಟಕದ ಮೇಲಿದೆ. ಕರ್ನಾಟಕಕ್ಕೆ 11,495 ಕೋಟಿ ಹಣ ಕೊಡಬೇಕಿತ್ತು. ಆದರೆ ಒಂದು ರೂಪಾಯಿ ಕೊಟ್ಟಿಲ್ಲ. ಅಪ್ಪರ್ ಭದ್ರ ಯೋಜನೆಗೆ 5,300 ಕೋಟಿ ಕೊಡ್ತೀನಿ ಅಂದ್ರು, ಈ ಯಮ್ಮ ಯಾರು? ನಿರ್ಮಲಾ ಸೀತರಾಮನ್, ಒಂದು ರೂಪಾಯಿ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಮೋದಿ ಮೋದಿ ಅಂತ ವೋಟು ಹಾಕಿಬಿಡ್ತೀರಲ್ಲ. ಪಿಸಿ ಮೋಹನ್ ಯಾವಾತ್ತಾದ್ರು ಸಂಸತ್ನಲ್ಲಿ ಮಾತಾಡಿದ್ದಾರಾ? ಒಂದು ದಿನವೂ ಕರ್ನಾಟಕದ ಬಗ್ಗೆ ಮಾತಾಡಿಲ್ಲ. ಅವನು ಯಾರು ಸೌತ್ ಅಲ್ಲಿ ಇದಾನಲ್ಲ ಅಮಾವಾಸ್ಯೆ ತೇಜಸ್ವಿ ಸೂರ್ಯ ಆತ ಕೂಡಾ ಕೇಂದ್ರದ ಬಳಿ ಹಣ ಕೇಳಲಿಲ್ಲ, ಆಯಮ್ಮ ಶೋಭಾ ಕರಂದ್ಲಾಜೆ ಕೂಡ ಹಣ ತರಲ್ಲ. ಮಂತ್ರಿ ಆಗಿರುವ ಕುಮಾರಸ್ವಾಮಿ ಕೂಡ ಕೇಂದ್ರದ ಬಳಿ ಹಣ ಕೇಳಿಲ್ಲ. ಇವ್ರಿಗೆ ನಾವು ಏನ್ ಮಾಡಬೇಕು ಹೇಳ್ರಿ? ಅವ್ರು ಮಾತಾಡಿಲ್ಲ ಅಂದ್ರೆ ನಿಮಗೆ ಕೋಪ ಬರುತ್ತದೆ ಅಲ್ವಾ? ಅದಕ್ಕೆ ಕುಮಾರಸ್ವಾಮಿ ಸೇರಿ ಎಲ್ಲ ಸಂಸದರನ್ನು ಸೋಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಬೆಂಗಳೂರಿಗೆ 1ಲಕ್ಷದ 25 ಸಾವಿರ ಕೋಟಿಯಲ್ಲಿ ಅಭಿವೃದ್ಧಿ ಮಾಡ್ತಿದ್ದೇವೆ. ಇವ್ರು ಏನಾದರೂ ಒಂದು ಗುಂಡಿ ಮುಚ್ಚಿದ್ದಾರಾ ಕೇಳಿ? ನಾವು ರಸ್ತೆ ಅಭಿವೃದ್ಧಿ ಪಡಿಸೋದನ್ನು ಬಿಟ್ಟು ಇವರ ಯೋಗ್ಯತೆಗೆ ಒಂದು ಗುಂಡಿಗೂ ಮಣ್ಣು ಹಾಕಿಲ್ಲ. ಒಂದು ಲಕ್ಷದ 17 ಸಾವಿರ ಕೋಟಿ ಸಾಲ ಮಾಡಿ ನಮ್ಮ ಮೇಲೆ ಬಿಟ್ಟು ಹೋಗಿದ್ದಾರೆ ಎಂದು ಸಿಎಂ ಹೇಳಿದ್ದಾರೆ.



















