ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಇಂದು( ಸೋಮವಾರ,ಸೆ.08) ಬೆಳಗ್ಗೆ 10 ಗಂಟೆ ಸುಮಾರಿಗೆ ಜಯಂತ್ ಟಿ. ಮುಖಕ್ಕೆ ಮುಸುಕು ಧರಿಸಿ ಒಳದಾರಿ ಮೂಲಕ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಐದನೇ ದಿನದ ವಿಚಾರಣೆಗಾಗಿ ಜಯಂತ್ ಟಿ. ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ನಿರಂತರ ವಿಚಾರಣೆಯಲ್ಲಿ ತೊಡಗಿದ್ದು, ಇಂದು ಮತ್ತೆ ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
“ಗಿರೀಶ್ ಮಟ್ಟಣ್ಣವರ್ ವಿಚಾರಣೆಗೆ ಹಾಜರು :”
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ದಿನದ ವಿಚಾರಣೆಗಾಗಿ ಇಂದು(ಸೋಮವಾರ) ಬೆಳಗ್ಗೆ 11:30ರ ಸುಮಾರಿಗೆ ಗಿರೀಶ್ ಮಟ್ಟಣ್ಣವರ್ ಬೆಳ್ತಂಗಡಿ ಎಸ್. ಐ.ಟಿ. ಕಚೇರಿಗೆ ಹಾಜರಾಗಿದ್ದಾರೆ.


















