ನವದೆಹಲಿ: ಕೇಂದ್ರ ಸರ್ಕಾರದ ಸಾಲ ಕಳೆದ 10 ವರ್ಷಗಳಲ್ಲಿ 130 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ.
ಲೋಕಸಭೆಯಲ್ಲಿ ಪ್ರಶೋತ್ತರ ಅವಧಿಯಲ್ಲಿ ಸಂಸದ ಡಾ.ಎಂ.ಕೆ. ವಿಷ್ಣು ಪ್ರಸಾದ್ ಕೇಳಿದ ಪ್ರಶ್ನೆಯೊಂದಕ್ಕೆಎ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ. 2015-16ರಲ್ಲಿ ಕೇಂದ್ರದ ಸಾಲವು 70.98 ಲಕ್ಷ ಕೋಟಿ ರೂ. ಆಗಿತ್ತು. 2025-26ರಲ್ಲಿ 200.16 ಲಕ್ಷ ಕೋಟಿಗೆ ಏರಿದೆ.
ಕೇಂದ್ರವು ಈ ವರ್ಷ 4.61 ಲಕ್ಷ ಕೋಟಿ ರೂ. ಸಾಲ ಮರುಪಾವತಿ ಮಾಡಿದೆ. ಒಟ್ಟು ಸಾಲಕ್ಕೆ ಈ ವರ್ಷ ಪಾವತಿಸುತ್ತಿರುವ ಬಡ್ಡಿ 12.76 ಲಕ್ಷ ಕೋಟಿ ರೂ ಆಗಿದೆ.



















