ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭಗೆ ಸಂಬಂಧಿಸಿದಂತೆ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯ ಬಿಜೆಪಿಯಲ್ಲಿ ಭಾರೀ ಒಗ್ಗಟ್ಟಿದೆ. ವಿಜಯೇಂದ್ರ ಬಂದ ಮೇಲೆ ಮತ್ತಷ್ಟು ಒಗ್ಗಟ್ಟು ಹೆಚ್ಚಾಗಿದೆ. ವಿಜಯೇಂದ್ರನನ್ನೇ ಮುಂದುವರೆಸಬೇಕು ಎಂದಾದರೆ ರಾಘವೇಂದ್ರ ಯಡಿಯೂರಪ್ಪ ಬಿಟ್ಟರೆ ಯಾವುದೇ ಸಂಸದರು ವಿಜಯೇಂದ್ರನನ್ನು ಮುಂದುವರೆಸಬೇಕೆಂದು ಒಪ್ಪಲ್ಲ ಎಂದು ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.
ಡಾಕ್ಟರ್ ICU ನಲ್ಲಿ ಇದ್ದಾಗಲೂ There are chances ಅಂತಾರೆ. ಹಾಗಾಗಿದೆ ಬಿಜೆಪಿಯೊಳಗಿನ ಪರಿಸ್ಥಿತಿ. ನಾನು ಎರಡು ದ್ವಾರ ಹಿಡಿದಿಟ್ಟಿದ್ದೇನೆ. ವಿಜಯೇಂದ್ರ ಮುಂದುವರೆಸಿದರೆ ಬಿಜೆಪಿ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇನೆ. ಲೋಕಸಭಾ ಚುನಾವಣೆಗೆ ಮಾತ್ರ ಕೇಂದ್ರ ಬಿಜೆಪಿಗೆ ಬಿಟ್ಟು ಕೊಡುತ್ತೇವೆ. ಬೊಮ್ಮಾಯಿ ಅವರು ಸುನಿಲ್ ಕುಮಾರ್, ಸೋಮಣ್ಣ ಅವರ ಎರಡು ಹೆಸರು ತೆಗೆದುಕೊಂಡು ಹೋಗಿದ್ದಾರೆ. ಮೇಲಿನವರಿಗೆ ಗೊತ್ತಿದೆ ಯಾರನ್ನು ರಾಜ್ಯಾಧ್ಯಕ್ಷ ಮಾಡಬೇಕು ಎಂದಿದ್ದಾರೆ.
ಯಡಿಯೂರಪ್ಪಗೆ ಯಾವುದೇ ಅಧಿಕಾರ ಇಲ್ಲ. ರಾಜ್ಯಾಧ್ಯಕ್ಷ ಅಲ್ಲದಿದ್ದರೂ ಟಿಕೆಟ್ ಘೋಷಣೆ ಮಾಡ್ತಾರೆ. ಯಶವಂತಪುರಕ್ಕೆ ಅಭ್ಯರ್ಥಿ ಹೆಸರು ಹೇಳಿದ್ದಾರೆ. ಎಸ್.ಟಿ. ಸೋಮಶೇಖರ್ ಪೂಜ್ಯ ತಂದೆಯವರ ಆಪ್ತ. ಆದಷ್ಟು ಬೇಗ ಜೆಡಿಎಸ್ ಜೊತೆ ಜಗಳ ಶುರುವಾಗಲಿ ಎಂದು ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದು ಗುಡುಗಿದ್ದಾರೆ.



















