ಬೆಂಗಳೂರು : ರನ್ನಿಂಗ್ ನಲ್ಲಿರುವ ಆಟೋ ಹಾಗೂ ನಿಂತಿರುವ ಕಾರಿನ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮರ ಬೀಳುತ್ತಿರುವ ಡೆಡ್ಲಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದಿರಾನಗರದ ಒಂದನೇ ಹಂತದ 11ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಆಟೋದ ಮೇಲೆ ಮರ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋ ಚಾಲಕನನ್ನು ರಕ್ಷಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.



















