ಕುಂಜಾಲುವಿನಲ್ಲಿ ಗೋಹತ್ಯೆ ವಿಚಾರವಾಗಿ ಧರ್ಮಗಳ ಮಧ್ಯೆ ದ್ವೇಷ ಹುಟ್ಟುವಂತಹ ಹೇಳಿಕೆ ನೀಡಿದ್ದಾರೆಂದು ಉಡುಪಿ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದ ಶರಣ್ ಪಂಪ್ ವೆಲ್ ಗೆ ಆರಂಭಿಕ ಜಯ ಸಿಕ್ಕಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಪಡಿಸಬೇಕೆಂದು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಎಸ್.ಆರ್.ಕೃಷ್ಣ ಕುಮಾರ್ ಇದ್ದ ಏಕಸದಸ್ಯ ಪೀಠ ವಿಚಾರಣೆ ನೆಡೆಸಿದೆ.
ಈ ವೇಳೆ ಶರಣ್ ಪಂಪ್ ವೆಲ್ ರನ್ನು ಬಂಧಿಸಬಾರದು ಮತ್ತು ಹೈಕೋರ್ಟ್ ಅನುಮತಿ ಇಲ್ಲದೇ ವಿಚಾರಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬಾರದು. ಅಲ್ಲದೇ, ವಿಚಾರಣೆಗೆ ಶರಣ್ ಪಂಪ್ ವೆಲ್ ಎಲ್ಲ ರೀತಿಯಿಂದ ಸಹಕರಿಸಬೇಕು ಎಂದು ನ್ಯಾಯ ಪೀಠ ಹೇಳಿದೆ. ಅಲ್ಲದೇ, ವಿಚಾರಣೆ ಮುಂದೂಡಿದೆ.


















