ಕೊಪ್ಪಳ : ಅಂಜನಾದ್ರಿಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದರೂ ಅರ್ಚಕರು ಪೂಜೆ ಮಾಡದಿರುವ ಘಟನೆ ನಡೆದಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆಂಜನೇಯನ ಪೂಜೆ ಮಾಡುತ್ತಿರುವ ವಿದ್ಯಾದಾಸ ಬಾಬಾ ಅವರು ಜಿಲ್ಲಾಧಿಕಾರಿಗಳು ಭೇಟಿ ನೀಡಿದರೂ ಪೂಜೆ ಮಾಡದೆ ನಿರಾಕರಣೆ ಮಾಡಿದ್ದಾರೆ.
ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಿಇಒ ಹುಂಡಿ ಹಾಕಿರುವ ಹಿನ್ನೆಲೆಯಲ್ಲ ಸಿಇಒ ಹಾಗೂ ವಿದ್ಯಾದಾಸ ಬಾಬಾರ ಮಧ್ಯೆ ವಿವಾದ ಸೃಷ್ಟಿಯಾಗಿತ್ತು. ನಿನ್ನೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ದರ್ಶನದ ಸಂದರ್ಭದಲ್ಲಿ ಪೂಜೆ ಮಾಡದೆ ವಿದ್ಯಾದಾಸ ಬಾಬಾ ನಿರಾಕರಣೆ ಧೋರಣೆ ತೋರಿಸಿದ್ದಾರೆ ಎನ್ನಲಾಗಿದೆ.
ಕೊನೆಗೆ ಧಾರ್ಮಿಕ ದತ್ತಿ ಇಲಾಖೆಯ ಅರ್ಚಕರಿಂದ ಪೂಜೆ ಮಾಡಲಾಯಿತು. ಇಮೇಲ್ ಮೂಲಕ ಸಿಇಒ ಪ್ರಕಾಶರಾವ್ ವಿರುದ್ದ ವಿದ್ಯಾದಾಸ ಬಾಬಾ ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದಾರೆ.



















