ಇಬ್ಬರ ಪರಿಚಯ ಇನ್ಸ್ಟಾಗ್ರಾಮ್ ನಲ್ಲಿ ಆಗುತ್ತೆ. ನಂತರ ಆ ಪರಿಚಯ ಪ್ರೀತಿಯಾಗಿ ತಿರುಗುತ್ತದೆ ಆದರೆ, ಅದೇನಾಯ್ತೋ? ಗೊತ್ತಿಲ್ಲ ಸ್ವಲ್ಪ ದಿನಕ್ಕೆ ಮಹಿಳೆ ಶವವಾಗಿ ಪತ್ತೆ ಆಗುತ್ತಾಳೆ. ಅಷ್ಟಕ್ಕೂ ಅವರಿಬ್ಬರ ಮಧ್ಯೆ ಆಗಿದ್ದೇನು? ಪ್ರೀತಿಯೇ ಅವಳ ಬದುಕಲ್ಲಿ ಮುಳುವಾಯ್ತ ತಿಳ್ಕೊಬೇಕಾದ್ರೆ ಈ ಕಂಪ್ಲೀಟ್ ಸ್ಟೋರಿ ಓದಿ…
ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಮದುವೆಯಾಗಿ ಗಂಡ ಮಕ್ಕಳ ಜೊತೆ ಒಂದು ಸಂಸಾರ ನಡೆಸುತ್ತಿದ್ದಳು. ಆದರೆ, ಪ್ರೀತಿಗೆ ಸಾಮಾಜಿಕ ಜಾಲತಾಣದ ಹುಚ್ಚು ಹೆಚ್ಚಿತ್ತು. ಈ ವೇಳೆ ಪುನೀತ್ ಎಂಬಾತನ ಪರಿಚಯವಾಗಿದೆ. ಸ್ನೇಹದಲ್ಲಿದ್ದ ಇಬ್ಬರೂ ಪರಸ್ಪರ ಪ್ರೀತಿಗೆ ಬಿದ್ದಿದ್ದಾರೆ. ನಂತರ ಪ್ರೀತಿ ಪ್ರೇಮದ ಹೆಸರಿನಲ್ಲಿ ಇಬ್ಬರೂ ಜಾಲಿಯಾಗಿ ಸುತ್ತಾಡುತ್ತಿದ್ದಾರೆ.
ಅದೇ ರೀತಿಯಾಗಿ ಕಳೆದ ಭಾನುವಾರ ಕೂಡ ಇಬ್ಬರು ಒಟ್ಟಿಗೆ ಕಾರಿನಲ್ಲಿ ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ ಫುಲ್ ಎಂಜಾಯ್ ಮಾಡಿದ್ದಾರೆ.
ಬಳಿಕ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಕೋಪದ ಭರದಲ್ಲಿ ಪುನೀತ್, ಪ್ರೀತಿಯನ್ನು ಕೊಲೆ ಮಾಡಿದ್ದಾನೆ. ನಂತರ ಮೈಮೆಲಿದ್ದ ಚಿನ್ನಾಭರಣ ದೋಚಿದ್ದಾನೆ. ಬಳಿಕ ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಶವ ಬಿಚ್ಚಿಟ್ಟಿದ್ದಾನೆ.
ಈ ಕಡೆ ಮಹಿಳೆ ಕಾಣೆಯಾದ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಪೊಲೀಸರು ತಲೆ ಕೆಡಿಸಿಕೊಂಡು ಮೃತೆ ಪ್ರೀತಿಯ ಮೊಬೈಲ್ ನ್ನು ಪರಿಶೀಲಿಸಿದ್ದಾರೆ. ಪ್ರಿಯತಮೆ ಫೋನ್ಗೆ ಬಂದ ಕಾಲ್ ನಿಂದಲೇ ಐನಾತಿ ಸಿಕ್ಕಿಬಿದಿದ್ದಾನೆ. ಒಟ್ಟಿನಲ್ಲಿ ಸುಂದರ ಸಂಸಾರ ಬಿಟ್ಟು ಪ್ರಿಯಕರನ ಹಿಂದೆ ಹೋಗಿದ್ದಕ್ಕೆ ತಕ್ಕ ಪಾಠ ಕಲಿಸಿದ್ದಾನೆ. ಆದರೆ ಈ ಕಡೆ ತಾಯಿಯ ಸಾವಿನಿಂದ ಮಕ್ಕಳು ತಬ್ಬಲಿಯಾಗಿದ್ದಾರೆ.