ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಇಸ್ರೇಲ್-ಇರಾನ್ ಸಂಘರ್ಷದಿಂದ ಕಚ್ಚಾ ತೈಲ ಬೆಲೆ ಏರಿಕೆ: ಅಮೆರಿಕ ರಣಾಂಗಣ ಪ್ರವೇಶಿಸಿದರೆ ಮತ್ತಷ್ಟು ಏರಿಕೆ ಖಚಿತ!

June 20, 2025
Share on WhatsappShare on FacebookShare on Twitter

ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ಇದರ ಜೊತೆಗೆ ಅವ್ಯಕ್ತ ಭೀತಿಯೂ ದಟ್ಟವಾಗಿದೆ. ಈ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದು, ಅಮೆರಿಕ ಮತ್ತು ಇರಾನ್ ನಡುವೆ ನೇರ ಸೇನಾ ಘರ್ಷಣೆಯ ಸಾಧ್ಯತೆಯಿಂದ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು 77 ಡಾಲರ್‌ಗೆ ತಲುಪಿದೆ.

ಈ ಸಂಘರ್ಷ ತೀವ್ರಗೊಂಡರೆ, ಇರಾನ್ ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚಬಹುದು. ತೈಲ ಹೊತ್ತು ತರುವ ನೌಕೆಗಳ ಮಾರ್ಗಗಳು ಬದಲಾವಣೆಯಾಗಬಹುದು, ಇದರಿಂದ ಸಾಗಾಣಿಕೆ ವೆಚ್ಚ ಗಣನೀಯವಾಗಿ ಏರಬಹುದು. ಜೊತೆಗೆ, ಇರಾನ್‌ನ ತೈಲ ಕ್ಷೇತ್ರಗಳಿಗೆ ಧಕ್ಕೆಯಾದರೆ, ಜಾಗತಿಕ ತೈಲ ಪೂರೈಕೆಯಲ್ಲಿ ಗಂಭೀರ ತೊಂದರೆ ಉಂಟಾಗಬಹುದು ಎಂಬೆಲ್ಲ ಭಯ ಆವರಿಸತೊಡಗಿದೆ.

ತೈಲ ಬೆಲೆ ಗಗನಕ್ಕೇರುವ ಭೀತಿ
ಪಶ್ಚಿಮ ಏಷ್ಯಾ ಜಾಗತಿಕ ತೈಲ ವ್ಯಾಪಾರದ ಕೇಂದ್ರಬಿಂದುವಾಗಿದೆ. ಹಾರ್ಮುಜ್‌ ಜಲಸಂಧಿಯಿಂದ ದಿನಕ್ಕೆ ಸುಮಾರು 17 ದಶಲಕ್ಷ ಬ್ಯಾರೆಲ್‌ಗಳಷ್ಟು ತೈಲ ಸಾಗಾಣಿಕೆಯಾಗುತ್ತದೆ. ಇದು ವಿಶ್ವದ ಒಟ್ಟು ತೈಲ ವ್ಯಾಪಾರದ ಶೇ.20ರಷ್ಟು. ಈ ಮಾರ್ಗದಲ್ಲಿ ಯಾವುದೇ ಅಡೆತಡೆ ಉಂಟಾದರೆ, ತೈಲ ಬೆಲೆ ಗಗನಕ್ಕೇರಿ, ಜಾಗತಿಕ ಮಟ್ಟದಲ್ಲಿ ಹಣದುಬ್ಬರ, ಸಾಗಾಣಿಕೆ ವೆಚ್ಚ ಮತ್ತು ಇಂಧನ ಪ್ರವೇಶದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಭಾರತದಂತಹ ದೇಶಗಳಿಗೆ ಅಂದರೆ ತನ್ನ ಒಟ್ಟು ಕಚ್ಚಾ ತೈಲ ಅಗತ್ಯದ ಶೇ.80ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುವಂತಹ ರಾಷ್ಟ್ರಕ್ಕೆ, ಈ ಏರಿಕೆಯು ಆರ್ಥಿಕ ಸವಾಲುಗಳನ್ನು ತಂದೊಡ್ಡಬಹುದು.

ತೀವ್ರಗೊಂಡ ಸಂಘರ್ಷ
ಜೂನ್ 13, 2025ರಂದು ಇಸ್ರೇಲ್ ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕೇಂದ್ರಗಳ ಮೇಲೆ ದಾಳಿ ಆರಂಭಿಸಿತು. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್‌ನ ಮೇಲೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಸಾವಿರಕ್ಕೂ ಅಧಿಕ ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿದೆ. ಈ ದಾಳಿಗಳಿಂದಾಗಿ ತೈಲ ಬೆಲೆ ಒಂದೇ ದಿನದಲ್ಲಿ ಶೇ.8ರಷ್ಟು ಏರಿಕೆಯಾಗಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ ಏಪ್ರಿಲ್‌ನಿಂದ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲ್ ಖಮೇನಿಗೆ “ಬೇಷರತ್ ಶರಣಾಗತಿ” ಆಗುವಂತೆ ಒತ್ತಾಯಿಸಿದ್ದಾರೆ. ಇದು ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಒಂದು ವೇಳೆ ಅಮೆರಿಕ ಸಂಘರ್ಷದಲ್ಲಿ ನೇರವಾಗಿ ಭಾಗವಹಿಸಿದರೆ, ತೈಲ ಬೆಲೆ ಬ್ಯಾರೆಲ್‌ಗೆ 90 ಡಾಲರ್‌ಗಿಂತಲೂ ಜಾಸ್ತಿಯಾಗಬಹುದು ಎಂದು ಗೋಲ್ಡ್‌ಮನ್ ಸಾಚ್ಸ್ ವಿಶ್ಲೇಷಕರು ಎಚ್ಚರಿಸಿದ್ದಾರೆ. ಕೆಲವು ವಿಶ್ಲೇಷಕರು, ಹಾರ್ಮುಜ್‌ ಜಲಸಂಧಿಯೇನಾದರೂ ಸಂಪೂರ್ಣ ಮುಚ್ಚಿದರೆ ಬೆಲೆ 120 ಡಾಲರ್‌ಗೂ ಜಿಗಿಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಭಾರತದ ಮೇಲೆನು ಪರಿಣಾಮ?
ಭಾರತವು 2019ರಲ್ಲಿ ಅಮೆರಿಕದ ನಿರ್ಬಂಧಗಳಿಂದಾಗಿ ಇರಾನ್‌ನಿಂದ ತೈಲ ಆಮದನ್ನು ಸ್ಥಗಿತಗೊಳಿಸಿತು. ಆದರೂ, ಪಶ್ಚಿಮ ಏಷ್ಯಾದ ಅಸ್ಥಿರತೆಯಿಂದ ಭಾರತಕ್ಕೆ ತೊಂದರೆಯಾಗದೇ ಇರದು. ಭಾರತದ ಕಚ್ಚಾ ತೈಲದ ಸರಾಸರಿ ಬೆಲೆ ಜೂನ್ 12ರಂದು 69.08 ಡಾಲರ್ ಆಗಿದ್ದು, ಜೂನ್ 13ರಂದು 73.12 ಡಾಲರ್‌ಗೆ ಏರಿತು. ಈ ಏರಿಕೆಯಿಂದ ಇಂಧನ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಗ್ರಾಹಕರ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಬಹುದು.

ಇದರ ನಡುವೆಯೇ ಗುರುವಾರ ಮಾತನಾಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ, ತೈಲ ಬೆಲೆ ಏರಿಕೆಯ ಆತಂಕವನ್ನು ತಗ್ಗಿಸುವ ಪ್ರಯತ್ನದಲ್ಲಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ಇದರ ಜೊತೆಗೇ ಹರ್ಮುಜ್ ಜಲಸಂಧಿ ಮುಚ್ಚಿದರೆ ಸಮಸ್ಯೆ ಎದುರಾಗಬಹುದು ಎಂಬ ಸುಳಿವನ್ನೂ ನೀಡಿದ್ದಾರೆ. ಆದರೆ, ಸಂಘರ್ಷ ತೀವ್ರಗೊಂಡರೆ, ಭಾರತಕ್ಕೆ ಪರ್ಯಾಯ ತೈಲ ಮೂಲಗಳನ್ನು ಆರಿಸಿಕೊಳ್ಳಲು ಹೆಚ್ಚಿನ ವೆಚ್ಚ ಮತ್ತು ಲಾಜಿಸ್ಟಿಕ್ ಸವಾಲುಗಳು ಎದುರಾಗಬಹುದು.

ಅಡುಗೆ ಎಣ್ಣೆ ಬೆಲೆ ಏರಿಕೆ
ಇಸ್ರೇಲ್-ಇರಾನ ಸಂಘರ್ಷದ ಪರಿಣಾಮವಾಗಿ, ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ 3-4 ರೂಪಾಯಿ ಏರಿಕೆಯಾಗಿದೆ. ಯುದ್ಧ ಮುಂದುವರಿದರೆ, ಇದು 10-30 ರೂಪಾಯಿಗಳವರೆಗೆ ಏರಬಹುದು ಎಂದೂ ಕೆಲವರು ಅಂದಾಜಿಸಿದ್ದಾರೆ.

ಜಾಗತಿಕ ಮಾರಾಟದ ಮೇಲಿನ ಪರಿಣಾಮ
ತೈಲ ಬೆಲೆ ಏರಿಕೆಯಿಂದಾಗಿ ವಿಮಾನಯಾನ, ಸರಕು ಸಾಗಣೆ ಮತ್ತು ಪ್ರಯಾಣ ಉದ್ಯಮಗಳ ಷೇರುಗಳು ಕುಸಿತ ಕಂಡಿವೆ. ಯುನೈಟೆಡ್ ಏರ್‌ಲೈನ್ಸ್, ಡೆಲ್ಟಾ ಏರ್‌ಲೈನ್ಸ್ ಮತ್ತು ಕ್ರೂಸ್ ಷಿಪ್ ಕಂಪನಿಗಳ ಷೇರುಗಳು ಶೇ.3-5ರಷ್ಟು ಕುಸಿದಿವೆ.

ಇದಕ್ಕೆ ವಿರುದ್ಧವಾಗಿ, ರಕ್ಷಣಾ ಕಂಪನಿಗಳಾದ ಲಾಕ್‌ಹೀಡ್ ಮಾರ್ಟಿನ್ ಷೇರುಗಳು ಶೇ.3.7ರಷ್ಟು ಏರಿಕೆ ಕಂಡಿವೆ. ಒಟ್ಟಿನಲ್ಲಿ, ಇಸ್ರೇಲ್-ಇರಾನ್ ಸಂಘರ್ಷದಿಂದ ಉಂಟಾದ ತೈಲ ಬೆಲೆ ಏರಿಕೆ ಜಾಗತಿಕ ಆರ್ಥಿಕತೆಗೆ, ವಿಶೇಷವಾಗಿ ಭಾರತದಂತಹ ತೈಲ ಆಮದು ರಾಷ್ಟ್ರಗಳಿಗೆ, ಈಗಾಗಲೇ ಸವಾಲಾಗಿದೆ. ಅಮೆರಿಕವೂ ರಣಾಂಗಣಕ್ಕೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವುದರಿಂದ ಈ ಸವಾಲು ಇನ್ನಷ್ಟು ತೀವ್ರಗೊಳ್ಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Tags: AmericaconflictCrude oilIsrael-IranStrait of Hormuz
SendShareTweet
Previous Post

ಕರುಣ್ ನಾಯರ್ ತವರು ತಂಡ ಕರ್ನಾಟಕಕ್ಕೆ ಭರ್ಜರಿ ಕಮ್‌ಬ್ಯಾಕ್!

Next Post

ವಿರಾಟ್ ಕೊಹ್ಲಿಯ ನಂ. 4 ಸ್ಥಾನ ಯಾರಿಗೆ? ಶುಭ್ಮನ್ ಗಿಲ್ ನಿಗೂಢ ಉತ್ತರ, ಗಂಭೀರ್ ಜೊತೆ ಚರ್ಚೆ ಬಯಲು!

Related Posts

1 ಗಂಟೆಯಲ್ಲಿ 7 ಸುಳ್ಳು : ಟ್ರಂಪ್ ದಿಗ್ಬಂಧನ ಹೇಳಿಕೆಗೆ ಕೆರಳಿದ ಇರಾನ್, ಹೊರ್ಮುಜ್ ಜಲಸಂಧಿ ಮತ್ತೆ ಮುಚ್ಚುವ ಎಚ್ಚರಿಕೆ!
ವಿದೇಶ

1 ಗಂಟೆಯಲ್ಲಿ 7 ಸುಳ್ಳು : ಟ್ರಂಪ್ ದಿಗ್ಬಂಧನ ಹೇಳಿಕೆಗೆ ಕೆರಳಿದ ಇರಾನ್, ಹೊರ್ಮುಜ್ ಜಲಸಂಧಿ ಮತ್ತೆ ಮುಚ್ಚುವ ಎಚ್ಚರಿಕೆ!

ಈಗ ಹೊರ್ಮುಜ್ ಜಲಸಂಧಿ ‘ಸಂಪೂರ್ಣ ಮುಕ್ತ’.. ಆದರೆ ಇರಾನ್ ಸೇನೆಯಿಂದ ಹೊಸ ಷರತ್ತು!
ವಿದೇಶ

ಈಗ ಹೊರ್ಮುಜ್ ಜಲಸಂಧಿ ‘ಸಂಪೂರ್ಣ ಮುಕ್ತ’.. ಆದರೆ ಇರಾನ್ ಸೇನೆಯಿಂದ ಹೊಸ ಷರತ್ತು!

ಇರಾನ್‌ನ ಗುಪ್ತ ನೌಕೆಗಳ ಮೇಲೆ ಟ್ರಂಪ್ ಕಣ್ಣು : ‘ಶ್ಯಾಡೋ ಫ್ಲೀಟ್’ ಜಾಲಕ್ಕೆ ಬ್ರೇಕ್ ಹಾಕಲು ಅಮೆರಿಕ ಸನ್ನದ್ಧ!
ವಿದೇಶ

ಇರಾನ್‌ನ ಗುಪ್ತ ನೌಕೆಗಳ ಮೇಲೆ ಟ್ರಂಪ್ ಕಣ್ಣು : ‘ಶ್ಯಾಡೋ ಫ್ಲೀಟ್’ ಜಾಲಕ್ಕೆ ಬ್ರೇಕ್ ಹಾಕಲು ಅಮೆರಿಕ ಸನ್ನದ್ಧ!

ರಷ್ಯಾ, ಇರಾನ್ ತೈಲ ಆಮದಿನ ಮೇಲಿನ ನಿರ್ಬಂಧ ವಿನಾಯಿತಿ ರದ್ದುಗೊಳಿಸಿದ ಅಮೆರಿಕ : ಭಾರತಕ್ಕೆ ತಟ್ಟಲಿದೆಯೇ ಬಿಸಿ?
ವಿದೇಶ

ರಷ್ಯಾ, ಇರಾನ್ ತೈಲ ಆಮದಿನ ಮೇಲಿನ ನಿರ್ಬಂಧ ವಿನಾಯಿತಿ ರದ್ದುಗೊಳಿಸಿದ ಅಮೆರಿಕ : ಭಾರತಕ್ಕೆ ತಟ್ಟಲಿದೆಯೇ ಬಿಸಿ?

ಹೊರ್ಮುಜ್ ಜಲಸಂಧಿ ಬೆನ್ನಲ್ಲೇ ‘ಮಲಕ್ಕಾ ಜಲಸಂಧಿ’ಯತ್ತ ಟ್ರಂಪ್ ಕಣ್ಣು!
ವಿದೇಶ

ಹೊರ್ಮುಜ್ ಜಲಸಂಧಿ ಬೆನ್ನಲ್ಲೇ ‘ಮಲಕ್ಕಾ ಜಲಸಂಧಿ’ಯತ್ತ ಟ್ರಂಪ್ ಕಣ್ಣು!

ಭದ್ರತಾ ಭೀತಿ : ವಿಮಾನ ಬದಲಿಸಿ ಬಸ್, ರೈಲಿನಲ್ಲಿ ತವರಿಗೆ ಮರಳಿದ ಇರಾನ್ ನಿಯೋಗ!
ವಿದೇಶ

ಭದ್ರತಾ ಭೀತಿ : ವಿಮಾನ ಬದಲಿಸಿ ಬಸ್, ರೈಲಿನಲ್ಲಿ ತವರಿಗೆ ಮರಳಿದ ಇರಾನ್ ನಿಯೋಗ!

Next Post
ವಿರಾಟ್ ಕೊಹ್ಲಿಯ ನಂ. 4 ಸ್ಥಾನ ಯಾರಿಗೆ? ಶುಭ್ಮನ್ ಗಿಲ್ ನಿಗೂಢ ಉತ್ತರ, ಗಂಭೀರ್ ಜೊತೆ ಚರ್ಚೆ ಬಯಲು!

ವಿರಾಟ್ ಕೊಹ್ಲಿಯ ನಂ. 4 ಸ್ಥಾನ ಯಾರಿಗೆ? ಶುಭ್ಮನ್ ಗಿಲ್ ನಿಗೂಢ ಉತ್ತರ, ಗಂಭೀರ್ ಜೊತೆ ಚರ್ಚೆ ಬಯಲು!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸೂಳೆಕೆರೆ ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಸೂಳೆಕೆರೆ ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ!

ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ!

15 ವರ್ಷಗಳ ಹಿಂದೆ ಸಕಲೇಶಪುರ ಜೈಲಿಂದ ತಪ್ಪಿಸಿಕೊಂಡಿದ್ದ ಆರೋಪಿ ಗೋವಾದಲ್ಲಿ ಅರೆಸ್ಟ್‌!

15 ವರ್ಷಗಳ ಹಿಂದೆ ಸಕಲೇಶಪುರ ಜೈಲಿಂದ ತಪ್ಪಿಸಿಕೊಂಡಿದ್ದ ಆರೋಪಿ ಗೋವಾದಲ್ಲಿ ಅರೆಸ್ಟ್‌!

‘ಮಕ್ಕಳ ಕಳ್ಳ’ನೆಂದು ಮಾನಸಿಕ ಅಸ್ವಸ್ಥ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ!

‘ಮಕ್ಕಳ ಕಳ್ಳ’ನೆಂದು ಮಾನಸಿಕ ಅಸ್ವಸ್ಥ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸೂಳೆಕೆರೆ ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಸೂಳೆಕೆರೆ ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ!

ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat