ಬೆಂಗಳೂರು: ಆದಾಯ ಹೆಚ್ಚಳ ಮಾಡಿಕೊಳ್ಳುವುದಕ್ಕಾಗಿ ಬಿಎಂಟಿಸಿಯ ಹಾದಿಯನ್ನು ನಮ್ಮ ಮೆಟ್ರೋ ಹಿಡಿದಿದೆ.
ಆದಾಯದ ಹೆಚ್ಚಳಕ್ಕಾಗಿ ಬಿಎಂಆರ್ ಸಿಎಲ್ ಇಂಡೋರ್ ಮತ್ತು ಔಟ್ ಡೋರ್ ಜಾಹೀರಾತು ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಇಂದು ಎಲ್ಲ ರೈಲುಗಳಲ್ಲಿ ಕಲರ್ ಕಲರ್ ಜಾಹೀರಾತು ಅಳವಡಿಸಲಾಗಿದೆ. ಪರ್ಪಲ್ ಲೈನ್ ನ 33 ರೈಲುಗಳು ಮತ್ತು ಗ್ರೀನ್ ಲೈನ್ ನಲ್ಲಿ 24 ರೈಲುಗಳಿಗೆ ಜಾಹೀರಾತು ಅಳವಡಿಕೆ ಮಾಡಿದೆ.
ಜಾಹೀರಾತು ಅಳವಡಿಕೆಯ ಹಿನ್ನೆಲೆಯಲ್ಲಿ ಮುದ್ರ ಅವೆಂಚರ್ ಮತ್ತು ಲೋಕೇಶ್ ಔಟ್ ಡೋರ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 7 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜಾಹೀರಾತು ಅಳವಡಿಕೆಗೆ ಪರ್ಪಲ್ ಲೈನ್ಸ್ ಗೆ 14 ಕೋಟಿ ರೂ. ಹಾಗೂ ಗ್ರೀನ್ ಲೈನ್ ಗೆ 11 ಕೋಟಿ ರೂ. ಫಿಕ್ಸ್ ಮಾಡಲಾಗಿದೆ. ಈಗಾಗಲೇ ಈ ಕುರಿತು ಬಿಎಂಆರ್ ಸಿಎಲ್ ಟೆಂಡರ್ ಆಹ್ವಾನಿಸಿದೆ. ಎರಡು ಲೈನ್ ನಿಂದ ಒಟ್ಟು 25 ಕೋಟಿ ರೂ. ಜಾಹೀರಾತು ಅಳವಡಿಕೆಗೆ ನಮ್ಮ ಮೆಟ್ರೋ ಒಪ್ಪಂದ ಮಾಡಿಕೊಂಡಿದೆ. ಈ ಜಾಹೀರಾತುಗಳಿಂದ ನಮ್ಮ ಮೆಟ್ರೋ 25 ಕೋಟಿ ರೂ. ಸಂಪಾದಿಸಲಿದೆ. ನಂತರ ಪ್ರತಿ ವರ್ಷ ಶೇ. 5ರಷ್ಟು ಏರಿಕೆ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ.