ಐಪಿಎಲ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ಹಾಗೂ ಪಂಜಾಬ್ ಮಧ್ಯೆ ಕಪ್ ಗಾಗಿ ಕದನ ಗುದ್ದಾಟ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿದೆ. ಈ ಮೂಲಕ ದೊಡ್ಡ ಮೊತ್ತ ಗಳಿಸಲು ಬೆಂಗಳೂರು ತಂಡ ವಿಫಲವಾಗಿದೆ.
ಆತ್ಮವಿಶ್ವಾಸದಿಂದ ಕಣಕ್ಕೆ ಇಳಿದ ಆರ್ ಸಿಬಿ ತಂಡಕ್ಕೆ ಫಿಲ್ ಸಾಲ್ಟ್ ಆಘಾತ ನೀಡಿದರು. ಫಿಲ್ ಸಾಲ್ಟ್ 9 ಎಸೆತಗಳಲ್ಲಿ 16 ರನ್ ಗಳಿಸಿ ಔಟ್ ಆದರು. ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿ ನಿರಾಸೆ ಮೂಡಿಸಿದರು.
ಮಯಾಂಕ್ ಅಗರ್ವಾಲ್ 18 ಎಸೆತಗಳಲ್ಲಿ 24, ರಜತ್ ಪಾಟಿದಾರ 16 ಎಸೆತಗಳಲ್ಲಿ 26, ಲೈಮ್ ಲಿವಿಂಗಸ್ಟನ್ 15 ಎಸೆತಗಳಲ್ಲಿ 26 ರನ್, ಜಿತೇಶ್ ಶರ್ಮಾ 15 ಎಸೆತಗಳಲ್ಲಿ 25 ರನ್, ರೋಮಾರಿಯೋ ಶೆಫರ್ಡ್ 9 ಎಸೆತಗಳಲ್ಲಿ 17 ರನ್, ಕೃಣಾಲ್ ಪಾಂಡ್ಯ 5 ಎಸೆತಗಳಲ್ಲಿ 4 ರನ್ ಭುವನೇಶ್ವರ್ ಕುಮಾರ್ 1 ರನ್, ಯಶ್ ದಯಾಳ್ 1 ರನ್ ಗಳಿಸಿದರು. ಪಂಜಾಬ್ ಪರ ಆರ್ಶದೀಪ್ ಸಿಂಗ್ 3, ಜೆಮೀಸನ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.