ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆಗೆ ಟ್ರಾಫಿಕ್ ಪೊಲೀಸರು ಪರದಾಟ ನಡೆಸುವಂತಾಗಿದೆ. ಶನಿವಾರ ಸಂಜೆಯಿಂದ ಸುರಿದ ಒಂದೇ ಮಳೆಗೆ ಸಂಚಾರಿ ಪೊಲೀಸರು ಹರ ಸಾಹಸಪಟ್ಟು ವಾಹನ ಸವಾರರನ್ನು ದಾಟಿಸಿದ್ದಾರೆ.
ಮಳೆಯಿಂದಾಗಿ ರಸ್ತೆಯಲ್ಲೆಲ್ಲ ನೀರು ಎನ್ನುವಂತಾಗಿತ್ತು. ಹೀಗಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಭಾರಿ ಮಳೆಯಲ್ಲಿಯೂ ನೀರು ಸಾಗಿಸಲು ಹೋರಾಟ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರೊಬ್ಬರ ಕಾರ್ಯ ವೈರಲ್ ಆಗಿದೆ. ರಸ್ತೆಯಲ್ಲಿ ನಿಂತಿದ್ದ ನೀರನ್ನು ಹರಿಯುವಂತೆ ಮಾಡಲು ಟ್ರಾಫಿಕ್ ಪೊಲೀಸ್ ಯತ್ನಿಸಿದ್ದಾರೆ. ಹೀಗಾಗಿ ಅವರು ಒಳಚರಂಡಿ ಸರಿಪಡಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಸಂಚಾರಿ ಪೊಲೀಸ್ ಪೇದೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.