ಸಮಂತಾ ರುತು ಪ್ರಭು….ಕಳೆದ ಒಂದೂಕಾಲು ದಶಕದಿಂದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಪರೂಪದ ಸುಂದರಿ. 2010ರಲ್ಲಿ ತೆರೆಗೆ ಬಂದ ಏ ಮಾಯ ಚೇಸಾವೋ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಸಮಂತಾ ಮುಂದೆ ಸಾಗಿದ ಹಾದಿ ನಿಜಕ್ಕೂ ಸಾಧನೆಯೇ ಸರಿ. ಅವತ್ತು ಮೊದಲ ಸಿನಿಮಾದಲ್ಲೇ ಅಕ್ಕಿನೇನಿ ಕುಟುಂಬದ ಕುಡಿಯೊಟ್ಟಿಗೆ ನಟಿಸಿದ್ದ ನಟಿ 2017ರಲ್ಲಿ ಅದೇ ಕುಟುಂಬದ ಸೊಸೆಯಾಗಿದ್ಲು. ನಾಗಚೈತನ್ಯ ಜೊತೆ ಸಪ್ತಪದಿ ತುಳಿದಿದ್ದ ಸಮಂತಾ ದಾಂಪತ್ಯ ಬದುಕು ಅದ್ಯಾಕೋ ಊಹಿಸಿದಂತೆ ಸಾಗಲೇ ಇಲ್ಲ. 2021ರ ಅಕ್ಟೋಬರ್ 2ರಂದು ದಂಪತಿ ವಿಚ್ಛೇದನವನ್ನೂ ಪಡೆದಾಗಿತ್ತು. ಆದ್ರೆ ಇದೇ ಸಮಂತಾ ಬಾಳಲ್ಲೀಗ ಮತ್ತೆ ಪ್ರೇಮ ನಿವೇದನೆಯಾಗಿದೆ. ನಾಗಚೈತನ್ಯನಿಂದ ತೆರವಾದ ಸಮಂತಾಳ ಹೃದಯ ಸಿಂಹಾಸನವನ್ನ ಓರ್ವ ಪ್ರಿಯಕರ ಅಲಂಕರಿಸಿ ಆಗಿದೆ.

ಫ್ಯಾಮಿಲಿ ಮ್ಯಾನ್ ನಿರ್ದೇಶಕನ ಮನದನ್ನೆ ಸಮಂತಾ
ನಾಲ್ಕು ವರ್ಷಗಳೇ ಕಳೆದು ಹೋಗಿವೆ. ಸಮಂತಾ ದಾಂಪತ್ಯದಲ್ಲಿ ಬೀಸಿದ ಬಿರುಗಾಳಿ ಆಕೆಯ ಆರೋಗ್ಯವನ್ನೂ ಪರಿಪರಿಯಾಗಿ ಕಾಡಿದ್ದು ಸುಳ್ಳಲ್ಲ. ಅತ್ತ ಸಮಂತಳಿಂದ ದೂರವಾಗಿದ್ದ ನಾಗ ಚೈತನ್ಯ, ಶೋಭಿತಾ ಧೂಳಿಪಾಲ್ ಜೊತೆ ಎರಡನೇ ಇನ್ನಿಂಗ್ಸ್ ಆರಂಭಿಸಿ ಆಗಿತ್ತು. ಆದ್ರೆ ಸಮಂತಾ ಮಾತ್ರ ತನ್ನ ಅನಾರೋಗ್ಯದೊಟ್ಟಿಗಿನ ಹೋರಾಟವನ್ನ ಮುಂದುವರಿಸಿದ್ರು. ಇಂಥಾ ಸಮಂತಾ ಮನಸ್ಸು ಮತ್ತೊಮ್ಮೆ ಪ್ರೀತಿಯ ನೌಕೆ ಏರಿ ಕಡಲಹಾದಿಯಲ್ಲಿ ಸಾಗುತ್ತಿದೆ. ಯೆಸ್, ಸಮಂತಾ ಮತ್ತು ರಾಜ್ ನಿಡುಮೋರು ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಬ್ಬರೂ ಅನ್ಯೋನ್ಯವಾಗಿರೋ ಫೋಟೋಗಳಿಗೂ ಬಯಲಾಗಿದೆ.

ಶುಭಂ ಸಿನಿಮಾ ಪ್ರಚಾರದಲ್ಲಿ ಸಮಂತಾ-ರಾಜ್ ಮಿಂಚಿಂಗ್
ಸಮಂತಾ ಮತ್ತು ರಾಜ್ ನಡುವೆ ಪ್ರೇಮಾಂಕುರವಾಗಿದೆ ಅನ್ನೋ ಮಾತುಗಳು ಆಗ್ಗಿಂದಾಗ್ಗೆ ಕೇಳಿ ಬರುತ್ತಲೇ ಇದ್ವು. ಯಾವಾಗ ಫ್ಯಾಮಿಲಿ ಮ್ಯಾನ್ ಸಿರೀಸ್ ನಲ್ಲಿ ಸಮಂತಾ ನಟಿಸಿದ್ರೋ ಆಗ್ಲೇ, ರಾಜ್ ರೊಟ್ಟಿಗಿನ ಬಾಂಧವ್ಯ ಹತ್ತಿರವಾಗಿದ್ದು. ಸಧ್ಯ ಸಮಂತಾ ತಮ್ಮದೇ ನಿರ್ಮಾಣದ ಶುಭಂ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಈ ಪ್ರಯಾಣದಲ್ಲೀಗ ಸಮಂತಾಗೆ ರಾಜ್ ಜೊತೆಯಾಗಿದ್ದಾರೆ. ಇಬ್ಬರೂ ಅನ್ಯೋನ್ಯವಾಗಿರೋ ಒಂದಷ್ಟು ಫೋಟೋಗಳನ್ನು ಸಮಂತಾ ಶೇರ್ ಮಾಡಿದ್ದು, ಸಮ್ ಥಿಂಗ್ ಈಸ್ ಕುಕ್ಕಿಂಗ್ ಅಂತಲೇ ಹೇಳಲಾಗ್ತಿದೆ. ಹಾಗಂತಾ ರಾಜ್ ಗೂ ಪತ್ನಿ ಮಗಳಿದ್ದಾರೆ. ಆದ್ರೆ ಸಮಂತಾ ಜೊತೆ ರಾಜ್ ಮುಂದಿನ ಪಯಣ ಹೇಗೆ…ಪತ್ನಿಗೆ ವಿಚ್ಛೇದನ ನೀಡಿ ರಾಜ್, ಸಮಂತಾರಾ ಕೈ ಹಿಡೀತಾರಾ..ಇಬ್ರೂ ನವ ಜೀವನ ಆರಂಭಿಸ್ತಾರಾ ಅನ್ನೋದು ಈಗಿರುವ ಪ್ರಶ್ನೆ.



















