ಪಾಕಿಸ್ತಾನಿಗಳ ನೀಚ ನರಿ ಬುದ್ಧಿ ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣವಾಗಿದೆ. ಆಪರೇಷನ್ ಸಿಂಧೂರ್ ದಾಳಿಯಲ್ಲಿ ಜೈಷ್ ಕಮಾಂಡರ್ ಮಸೂದ್ ಅಜರ್ ನ ಕುಟುಂಬದ 14 ಮಂದಿ ಬಲಿಯಾಗಿದ್ರು. ಈ ಪರಮಪಾಕಿಯ ಕುಟುಂಬಕ್ಕೀಗ ಪಾಕ್ ಸರ್ಕಾರ 14 ಕೋಟಿ ಪರಿಹಾರ ಘೋಷಿಸಿದೆ.
ಆಪರೇಷನ್ ಸಿಂಧೂರ್ ನಲ್ಲಿ ಪ್ರಾಣತೆತ್ತ ಪ್ರತಿಯೊಬ್ಬರಿಗೂ ತಲಾ ಒಂದು ಕೋಟಿಯಂತೆ ಒಟ್ಟು 14 ಕೋಟಿ ಪರಿಹಾರವನ್ನು ಪಾಕ್ ಸರ್ಕಾರ ಘೋಷಿಸಿದೆ. ಈ ಮೂಲಕ ತಾನು ಉಗ್ರವಾದದ ಪರ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದೆ. ಮೇ 7ರಂದು ಭಾರತ ಜೈಷ್ ಸಂಘಟನೆಯ ಕೇಂದ್ರ ಕಚೇರಿಯಾದ ಸುಭಾನ್ ಮಸೀದಿ ಮೇಲೆ ದಾಳಿ ಮಾಡಲಾಗಿತ್ತು. ಲಾಹೋರ್ ನಿಂದ 400 ಕಿಲೋಮೀಟರ್ ದೂರದಲ್ಲಿರುವ ಭಾವಲ್ ಪುರದಲ್ಲಿ ಈ ಮಸೀದಿಯಿದ್ದು, ಇಲ್ಲೇ ಜೈಶ್ ಉಗ್ರರ ನೇಮಕಾತಿ ಮತ್ತು, ತರಬೇತಿ ನಡೆಯುತ್ತಿತ್ತು.



















