ಮನೋರಂಜನಾ ಜಗತ್ತು. ವಿಶ್ವವನ್ನೇ ಮಂತ್ರಮುಗ್ಧಗೊಳಿಸುವ, ಮೋಡಿ ಮಾಡುವ ತಾಕತ್ತಿರುವ ಮಾಧ್ಯಮ. ಈ ಬಣ್ಣದ ಲೋಕದಲ್ಲಿ ತಾರೆಯಾಗಿ ಮಿಂಚಿ ಅಭಿಮಾನಿಗಳ ಎದೆಯಲ್ಲಿ ಸಿಂಹಾಸನಾಧೀಶರಾದವರು ಅದೆಷ್ಟೋ ಮಂದಿ.
ಕೆಲವರನ್ನಂತೂ ಅಭಿಮಾನಿಗಳು ದೇವರು ಅಂತಲೇ ಮಂದಿರ ಕಟ್ಟಿ ಪೂಜಿಸಿದ ಉದಾಹರಣೆಗಳು ಭಾರತದಲ್ಲಿವೆ. ಹಾಗಂತಾ ಈ ಅಭಿಮಾನ ಇಂತಹ ಅದೆಷ್ಟೋ ತಾರೆಯರನ್ನು ಕುಬೇರರನ್ನಾಗಿಸಿರುವುದು ಸುಳ್ಳಲ್ಲ. ವಿಶ್ವದ ಅತ್ಯಂತ ಸಿರಿವಂತ ತಾರೆಯರ ಪಟ್ಟಿಯನ್ನು ಅಮೆರಿಕದ ಬ್ಯುಸಿನೆಸ್ ಮ್ಯಾಗಜೀನ್, ಎಸ್ಕ್ವೈರ್ ರಿಲೀಸ್ ಮಾಡಿದೆ.
ಹಾಲಿವುಡ್ ಅತಿರಥರಿಗೆ ಪೈಪೋಟಿ ಕೊಟ್ಟ ಕಿಂಗ್ ಖಾನ್
ಎಸ್ಕ್ವೈರ್ ಮ್ಯಾಗಜಿನ್ ರಿಲೀಸ್ ಮಾಡಿರುವ ಶ್ರೀಮಂತ ತಾರೆಯರ ಪಟ್ಟಿಯಲ್ಲಿ ಭಾರತದ ಏಕಮಾತ್ರ ತಾರೆಗೆ ಸ್ಥಾನ ಸಿಕ್ಕಿದೆ. ಅದು ಬೇರಾರೂ ಅಲ್ಲ ಓನ್ ಅಂಡ್ ಓನ್ಸಿ ಶಾರುಖ್ ಖಾನ್. ಹೌದು, ಜಗತ್ತಿನ ಆಗರ್ಭ ಶ್ರೀಮಂತ ನಟರ ಪಟ್ಟಿಯಲ್ಲಿ ಬಾಲಿವುಡ್ ಬಾದ್ ಶಾ ಶಾರುಖd ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.
ಯಾವ ನಟನ ಸಂಪತ್ತು ಎಷ್ಟೆಷ್ಟಿದೆ?
ಈ ಕೋಟ್ಯಾಧೀಶ ತಾರೆಯರ ಪಟ್ಟಿಯಲ್ಲಿ ಹಾಲಿವುಡ್ ನ ಅತಿರಥರು ಸ್ಥಾನ ಅಲಂಕರಿಸಿದ್ದಾರೆ. ಈ ಪೈಕಿ ಮೊದಲ ಸ್ಥಾನವನ್ನು ಹಾಲಿವುಡ್ ನ ಲೆಜೆಂಡ್ ಆಕ್ಟರ್ ಅರ್ನಾಲ್ಡ್ ವಿರಾಜಮಾನರಾಗಿದ್ದಾರೆ. 12,814 ಕೋಟಿ ಸಂಪತ್ತನ್ನು ಈ ನಟ ಹೊಂದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ 10,234 ಕೋಟಿಗಳ ಒಟ್ಟು ಸಂಪತ್ತಿನೊಂದಿಗೆ ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಇದ್ದಾರೆ. ಮೂರನೇ ಸ್ಥಾನದಲ್ಲಿ 7662 ಕೋಟಿ ರೂ.
ಆಸ್ತಿಯ ಒಡೆಯ ಟಾಮ್ ಕ್ರೂಸ್ ಇದ್ದರೆ, ನಾಲ್ಕನೇ ಸ್ಥಾನವನ್ನು ಬಾಲಿವುಡ್ ತಾರೆ ಶಾರುಖ್ ರಾರಾಜಿದ್ದಾರೆ. ಒಟ್ಟು, 7400 ಕೋಟಿ ಆಸ್ತಿಯ ಸಾಮ್ರಾಟ ಶಾರುಖ್, ಭಾರತೀಯರೇ ಹೆಮ್ಮೆ ಪಡುವಂತೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿರುವ ಜಾರ್ಜ್ ಕ್ಲೂನ್ 6381 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.
ಕ್ರಿಕೆಟ್, ಪ್ರೊಡೆಕ್ಷನ್ ಹೌಸ್ ನಿಂದ ಅಪಾರ ಗಳಿಕೆ
ಹಾಗೆ ನೋಡಿದರೆ, 59 ವರ್ಷ ವಯಸ್ಸಿನ ಶಾರುಖ್ ರ ಡಂಕಿ ಸಿನಿಮಾ ಬಳಿಕ ಇನ್ನೊಂದು ಸಿನಿಮಾ ರಿಲೀಸ್ ಆಗಿಲ್ಲ. ಹಾಗಿದ್ರೂ, ಇದು ಶಾರುಖ್ ಸಂಪತ್ತಿನ ಕೋಟೆಗೆ ಕಿಂಚಿತ್ ಅಡ್ಡಿಯಾಗಿಲ್ಲ. ಯಾಕೆಂದ್ರೆ ಶಾರುಖ್ ಸಿನಿಮಾ ಹೊರತಾಗಿ ತಮ್ಮ ಸಂಪತ್ತನ್ನು ಹಲವು ವಲಯಗಳಲ್ಲಿ ಹೂಡಿಕೆ ಮಾಡುದ್ದಾರೆ. ಐಪಿಎಲ್ ನ ಕೋಲ್ಕತ್ತ ನೈಟ್ ರೈಡರ್ಸ್, ಸಿನಿಮಾ ಪ್ರೊಡಕ್ಷನ್ ಕೆಲಸಗಳಿಗೆ ಮೀಸಲಿರುವ ರೆಡ್ ಚಿಲ್ಲಿ ಎಂಟರ್ ಟ್ರೈನ್ ಮೆಂಟ್ ಸೇರಿದಂತೆ ಹತ್ತಾರು ಜಾಹೀರಾತುಗಳು ಅವರ ಹಣದ ಹರಿವನ್ನು ಇಮ್ಮಡಿಗೊಳಿಸುತ್ತಲೇ ಸಾಗಿವೆ. ಈ ಮೂಲಕ ಶಾರುಖ್ ಇದೀಗ ವಿಶ್ವದ ಘಟಾನುಘಟಿ ಕುಬೇರ ತಾರೆಯರ ಸಾಲಿನಲ್ಲಿ ತಮ್ಮ ಪಾರಮ್ಯ ಮೆರೆದಿದ್ದಾರೆ.



















