ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋಗಾಗಿ ಕಾಯುತ್ತಿರುವ ಸಿಲಿಕಾನ್ ಸಿಟಿ ಜನರಿಗೆ ಬಿಎಂಆರ್ಸಿಎಲ್ (BMRCL) ಗುಡ್ ನ್ಯೂಸ್ ನೀಡಿದೆ.
ಸಿಲಿಕಾನ್ ಸಿಟಿಗೆ ಟಿಟಾಗಢನಿಂದ 3 ಹೊಸ ಮೆಟ್ರೋ ಬೋಗಿಗಳು ಬರುತ್ತಿವೆ. ಶುಕ್ರವಾರ ಇನ್ನೂ 3 ಬೋಗಿಗಳು ಮತ್ತು ಮೇ 10-15 ರ ನಡುವೆ ಅಂತಿಮ ಕೋಚ್ಗಳು ನಗರಕ್ಕೆ ಬರುವ ಸಾಧ್ಯತೆ ಇದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಹೀಗಾಗಿ ಬಿಎಂಆರ್ ಸಿಎಲ್, ಬಹು ನಿರೀಕ್ಷಿತ ಹಳದಿ ಮಾರ್ಗವನ್ನು ಚಾಲನೆಗೊಳಿಸುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮೂರನೇ 6- ಕೋಚ್ ರೈಲಿನ ಮೂರು ಕೋಚ್ಗಳನ್ನು ಯಶಸ್ವಿಯಾಗಿ ಟಿಟಾಗಢ ಫ್ಯಾಕ್ಟರಿಯಿಂದ ಏಪ್ರಿಲ್ 29ರಂದು ಬೆಂಗಳೂರಿಗೆ ರವಾನಿಸಲಾಗಿದ್ದು, ಉಳಿದ ಮೂರು ಕೋಚ್ ಗಳನ್ನು 2025ರ ಮೇ 2 ರಂದು ರವಾನಿಸಲಾಗುವುದು ಎಂದು ಹೇಳಿದೆ.
ಜೂನ್ ಅಥವಾ ಜುಲೈ ಒಳಗೆ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ ಅವಕಾಶ ಸಿಗಲಿದ್ದು, ಜೂನ್ ಮೊದಲ ವಾರಕ್ಕೆ ಮತ್ತೊಂದು ರೈಲು ಸಿಗಲಿದೆ. ಅಲ್ಲಿಗೆ ಒಟ್ಟು 4 ರೈಲು ಈ ಮಾರ್ಗಕ್ಕೆ ಸಿಗಲಿವೆ. ಈ ಹಿನ್ನೆಲೆಯಲ್ಲಿ ಜೂನ್ ಕೊನೆಯ ಅಥವಾ ಜುಲೈ ಮೊದಲ ವಾರದಲ್ಲಿ ಈ ನಾಲ್ಕು ರೈಲ್ವೆ ಮಾರ್ಗ ಓಪನ್ ಮಾಡುವುದು ಬಹುತೇಕ ಖಚಿತವಾಗಿದೆ. ಪ್ರತಿ 30 ನಿಮಿಷಕ್ಕೊಂದು ರೈಲಿನಂತೆ ಸಂಚಾರ ಮಾಡುವ ಸಾಧ್ಯತೆ ಇದೆ.