ಬೆಂಗಳೂರು: ನಂದಿನ ಹಾಲಿನ ದರ ಏರಿಕೆಯಾದ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬರೆ ಬೀಳುತ್ತಿದೆ.
ಹಾಲು ಮತ್ತು ಡೈರಿ ವಸ್ತು ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಅಮುಲ್ ಈಗ ಹಾಲಿನ ದರ ಏರಿಕೆ ಮಾಡುತ್ತಿದೆ. ಸದ್ಯ ಕಂಪನಿ ಹಾಲಿನ ಬೆಲೆಯನ್ನು ಲೀಟರ್ ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಪರಿಷ್ಕೃತ ಬೆಲೆ ದೇಶಾದ್ಯಂತ ಇಂದಿನಿಂದಲೇ ಜಾರಿಗೆ ಬಂದಿದೆ.
2024 ರ ಜೂನ್ ನಿಂದ ಹಾಲಿನ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ ಎಂದು ಕಂಪನಿ ತಿಳಿಸಿದೆ. ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್ಗಳಿಗೆ ಅನ್ವವಾಗುತ್ತದೆ.
ಕಳೆದ ವರ್ಷವಷ್ಟೇ ಗ್ರಾಹಕರಿಗೆ ರಿಲೀಫ್ ನೀಡಲು ಅಮುಲ್ ಸುಮಾರು ಐದು ತಿಂಗಳ ಕಾಲ 1 ಲೀಟರ್ ಮತ್ತು 2 ಲೀಟರ್ ಹಾಲಿನ ಪ್ಯಾಕ್ ಗಳಲ್ಲಿ ಕ್ರಮವಾಗಿ 50 ಮಿ.ಮೀ ಮತ್ತು 100 ಮಿ.ಲೀ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. ಇದಲ್ಲದೆ, 2025 ರ ಜನವರಿಯಲ್ಲಿ, 1 ಲೀಟರ್ ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.
ಅಮುಲ್ ಹಾಲು ದರ ಏರಿಕೆ: ಯಾವ ಪ್ಯಾಕೆಟ್ಗೆ ಎಷ್ಟು?
ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ)
ಹಳೆಯ ಬೆಲೆ: 30 ರೂ.
ಹೊಸ ಬೆಲೆ: 31 ರೂ.
ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ
ಹಳೆಯ ಬೆಲೆ: 36 ರೂ.
ಹೊಸ ಬೆಲೆ: 37 ರೂ.
ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ)
ಹಳೆಯ ಬೆಲೆ: 33 ರೂ.
ಹೊಸ ಬೆಲೆ: 34 ರೂ.
ಅಮುಲ್ ಗೋಲ್ಡ್ ಹಾಲು (1 ಲೀಟರ್)
ಹಳೆಯ ಬೆಲೆ: 65 ರೂ.
ಹೊಸ ಬೆಲೆ: 67 ರೂ.
ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್ ಮಿಲ್ಕ್ (500 ಮಿ.ಲೀ)
ಹಳೆಯ ಬೆಲೆ: 24 ರೂ.
ಹೊಸ ಬೆಲೆ: 25 ರೂ.
ಅಮುಲ್ ಚಾಯ್ ಸ್ಪೆಷಲ್ ಹಾಲು (500 ಮಿ.ಲೀ)
ಹಳೆಯ ಬೆಲೆ: 31 ರೂ.
ಹೊಸ ಬೆಲೆ: 32 ರೂ.
ಅಮುಲ್ ತಾಜಾ ಹಾಲು (500 ಮಿ.ಲೀ)
ಹಳೆಯ ಬೆಲೆ: 27 ರೂ.
ಹೊಸ ಬೆಲೆ: 28 ರೂ.
ಅಮುಲ್ ತಾಜಾ ಹಾಲು (1 ಲೀಟರ್)
ಹಳೆಯ ಬೆಲೆ: 53 ರೂ.
ಹೊಸ ಬೆಲೆ: 55 ರೂ.


















