ಬೆಳಗಾವಿಯಲ್ಲಿ ಗೂಡ್ಸ್ ರೈಲಿನ ಡಬ್ಬಿಗಳು ಹಳಿ ತಪ್ಪಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಜಿಂದಾಲ್ ದಿಂದ ಮಿರಜ್ ಕಡೆಗೆ ಹೊರಟಿದ್ದ ಗೂಡ್ಸ್ ರೈಲು ಬೆಳಗಾವಿ ಮಿಲಿಟರಿ ಮಹಾದೇವ ಟೆಂಪಲ್ ಬಳಿ ಪಲ್ಟಿಯಾಗಿದೆ.
ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಬ್ಬಿನದ ಅದಿರು ತೆಗೆದುಕೊಂಡು ಹೋಗುವಾಗ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ಪ್ಲಾಟ್ ಫಾರ್ಮ್ ಬದಲಿಸುವಾಗ ಹಳ್ಳಿತಪ್ಪಿ ರೈಲಿನ ಡಬ್ಬಿಗಳು ಉರುಳಿ ಬಿದ್ದಿವೆ. ಸ್ಥಳಕ್ಕೆ ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



















