ಧಾರವಾಡ : ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ ಬಂದಿದ್ದ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರದ ಮೂಲದ ಮಾರುತಿ (25) ಹೃದಯಾಘಾತಕ್ಕೆ ಬಲಿಯಾದ ಯುವಕ. ಮಾರುತಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಪಡೆಯಲು ಮಾರುತಿ ಧಾರವಾಡಕ್ಕೆ ಬಂದಿದ್ದ. ಕಳೆದ ಮೂರು ವರ್ಷದಿಂದ ಧಾರವಾಡದಲ್ಲೇ ಇದ್ದು ತರಬೇತಿ ಪಡೆಯುತ್ತಿದ್ದ.
ಧಾರವಾಡದಲ್ಲೇ ರೂಮ್ ಮಾಡಿಕೊಂಡು ವಾಸವಿದ್ದ ಮಾರುತಿಗೆ ಮಂಗಳವಾರ ರಾತ್ರಿ ರೂಮ್‌ನಲ್ಲೇ ಹೃದಯಾಘಾತವಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಕೋಲ್ಕತ್ತಾದ ಪ್ರತಿಷ್ಠಿತ ಕಾಲೇಜಿನಲ್ಲಿ ಕೋಟಿ ಕೋಟಿ ನಗದು, ರಹಸ್ಯ ಬೆಡ್‌ರೂಂ, ಪಿಸ್ತೂಲ್‌ಗಳು ಪತ್ತೆ!


















