ಬೀದರ್: ಜಿಲ್ಲೆಯ ಹುಮನಾಬಾದ್ ತಾಲೂಕಿನ ಬೆನಚಿಂಚೋಳಿ ಗ್ರಾಮದ ಯುವಕರು ‘ಕಾಕ್ರೋಚ್ ಜನತಾ ಪಾರ್ಟಿ’ ವಿನಾಶಕ್ಕಾಗಿ ಹರಕೆ ಹೊತ್ತು ಪಾದಯಾತ್ರೆ ಆರಂಭಿಸಿದ್ದಾರೆ. ಮೋದಿ ಅಭಿಮಾನಿ ರಮೇಶ್ ರೆಡ್ಡಿ ನೇತೃತ್ವದಲ್ಲಿ ಬೆನಚಿಂಚೋಳಿ ಗ್ರಾಮದಿಂದ ಮಹಾರಾಷ್ಟ್ರದ ತುಳಜಾಪುರದ ಅಂಬಾಭವಾನಿ ದೇವಸ್ಥಾನದವರೆಗೆ ಸುಮಾರು 150 ಕಿಲೋಮೀಟರ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸಿಜೆಪಿಯ ಪೋಸ್ಟರ್ ಹಾಗೂ ಹಿಟ್ ಹಿಡಿದುಕೊಂಡು ತುಳಜಾಪುರದತ್ತ ಹೆಜ್ಜೆ ಹಾಕುತ್ತಿರುವ ಯುವಕರು, ಕಾಕ್ರೋಚ್ ಜನತಾ ಪಾರ್ಟಿ ವಿನಾಶವಾಗಲಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಇನ್ನಷ್ಟು ಶಕ್ತಿ ಸಿಗಲಿ ಎಂದು ದೇವಿಯಲ್ಲಿ ಹರಕೆ ಹೊತ್ತಿದ್ದಾರೆ. ಹುಣ್ಣಿಮೆಯ ದಿನ ತುಳಜಾಪುರ ತಲುಪಿ ಅಂಬಾಭವಾನಿಯ ದರ್ಶನ ಪಡೆದು ಹರಕೆ ತೀರಿಸಲಿರುವ ಯುವಕರು, ಜೆನ್ಜಿಗಳು ಕಾಕ್ರೋಚ್ ಜನತಾ ಪಾರ್ಟಿಯ ಒಳಸಂಚಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಕೇಂದ್ರ ಚುನಾವಣಾ ಆಯೋಗದ ಭಿನ್ನಮತ ಸ್ಫೋಟ: ಉಪ ಚುನಾವಣಾ ಆಯುಕ್ತರ ವಿರುದ್ಧ ಸಂಪುಟ ಕಾರ್ಯದರ್ಶಿಗೆ ಇಬ್ಬರು ಇಸಿಗಳ ದೂರು!


















